ಕಲ್ಪ ಮೀಡಿಯಾ ಹೌಸ್ | ಅಥಣಿ |
ಪಟ್ಟಣದ ಸೌಂದರ್ಯ ಹೆಚ್ಚಿಸಲು ನಿರಂತರ ಗಮನ ಹರಿಸುವ ಪೌರಕಾರ್ಮಿಕರನ್ನು ಗೌರವ, ಪ್ರೀತಿಯಿಂದ ಕಾಣಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ತಾಲ್ಲೂಕು ದಂಡಾಧಿಕಾರಿ ದುಂಡಪ್ಪಾ ಕೊಮಾರ ಹೇಳಿದರು.
ಅವರು ಪುರಸಭೆಯ ಸಭಾಭವನದಲ್ಲಿ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ಅಭಿವೃದ್ಧಿಯು ಅದರ ಸ್ವಚ್ಛತೆ ಮೇಲೆ ಅವಲಂಬಿಸಿರುತ್ತದೆ. ನಿಷ್ಠೆಯಿಂದ ಕರ್ತವ್ಯ ಪಾಲನೆ ಮಾಡುವ ಪೌರಕಾರ್ಮಿಕರನ್ನು ಅಸಡ್ಡೆಯಿಂದ ಕಾಣದೇ ಅವರನ್ನು ಗೌರವದಿಂದ ಕಾಣಬೇಕು. ಅದೇ ಅವರಿಗೆ ನೀಡುವ ಕಾಣಿಕೆ. ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲು ಸಹಕರಿಸಬೇಕು ಎಂದು ಹೇಳಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ ಮಾತನಾಡಿದರು, ವಿಠ್ಠಲ ನಾಗಣಕೇರಿ, ಚನ್ನಪ್ಪ ಪಟ್ಟಣ, ರಾಜು ವಾಳವೇಕರ ಸೇರಿದಂತೆ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post