ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಗೃಹರಕ್ಷಕದಳದಿಂದ ಹಮ್ಮಿಕೊಂಡಿದ್ದ ವಿವಿಧ ಕರ್ತವ್ಯಗಳಿಗೆ ಗೃಹರಕ್ಷಕರ ನಿಯೋಜನೆ, ಕಚೇರಿ ಸ್ವಚ್ಚತಾ ಕಾರ್ಯ, ಕಚೇರಿ ಕಟ್ಟಡ ಕಾರ್ಯ ಮತ್ತು ಉತ್ತಮ ಗೃಹರಕ್ಷಕ ಮತ್ತು ಗೃಹರಕ್ಷಕಿಯರ ಅಚ್ಚುಕಟ್ಟಾದ ಶಿಸ್ತಿಗೆ ಸಂಬಂಧಪಟ್ಟ ಮಾಹಿತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗೃಹರಕ್ಷಕದಳದಲ್ಲಿಯೇ ಬಳ್ಳಾರಿ ಜಿಲ್ಲೆಯ ಗೃಹರಕ್ಷಕದಳ ಬಳ್ಳಾರಿ ಘಟಕಕ್ಕೆ ಉತ್ತಮ ಘಟಕ ಪ್ರಶಸ್ತಿ ಲಭಿಸಿರುತ್ತದೆ.
ಆ.15ರಂದು ಬೆಂಗಳೂರಿನಲ್ಲಿ ಗೃಹರಕ್ಷಕದಳ ಕೇಂದ್ರ ಕಚೇರಿ ವತಿಯಿಂದ ನಡೆದ 76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಉತ್ಸವ ಸಮಾರಂಭದಲ್ಲಿ ಡೆಪ್ಯೂಟಿ ಜನರಲ್ ಪೊಲೀಸ್ ಮತ್ತು ಗೃಹರಕ್ಷಕದಳದ ಕಮಾಂಡೆಂಟ್ ಜನರಲ್ ಡಾ.ಅಮರ್ ಕುಮಾರ್ ಪಾಂಡೆ ಅವರು ಪ್ರಶಂಸನಾ ಪತ್ರ ಮತ್ತು ಟ್ರೋಫಿಯನ್ನು ಗೃಹರಕ್ಷಕದಳದ ಘಟಕಾಧಿಕಾರಿಗಳಾದ ಜೆ.ಸುರೇಶ್ ಹಾಗೂ ಗೃಹರಕ್ಷಕದಳದ ಪ್ಲಟೂನ್ ಕಮಾಂಡರ್ ಬಿ.ಕೆ. ಬಸವಲಿಂಗ ಅವರಿಗೆ ವಿತರಿಸಿದರು.

Also read: ಚೂರಿ ಇರಿತಕ್ಕೆ ಒಳಗಾದ ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್










Discussion about this post