ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು Minister B Shriramulu ಅವರು ನಗರದಲ್ಲಿ ರಸ್ತೆ, ಒಳಚರಂಡಿ ಕಾಮಗಾರಿ, ಸ್ಟೀಲ್ ಬ್ರೀಡ್ಜ್ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ನಗರದ ಬೆಳಗಲ್ ರಸ್ತೆಯ ಎಚ್‍ಎಲ್‍ಸಿ ಕಾಲುವೆ ಹತ್ತಿರ 2.50 ಕೋಟಿ ರೂ.ವೆಚ್ಚದಲ್ಲಿ ಸ್ಟೀಲ್ ಬ್ರೀಡ್ಜ್ ನಿರ್ಮಾಣ ಕಾಮಗಾರಿ, ಸುಧಾ ಸರ್ಕಲ್ ಬಳಿಯ ಸೆಂಟ್ ಫಿಲೋಮಿನಾ ಶಾಲೆಯ ಹತ್ತಿರದ 1.70 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಸುಧಾರಣಾ ಕಾಮಗಾರಿ, ನಗರದ ವಾರ್ಡ್ ಸಂ.29ರ ವ್ಯಾಪ್ತಿಯ ಈದ್ಗಾ ಮೈದಾನ ಹತ್ತಿರದ ರಸ್ತೆ ಸುಧಾರಣಾ ಕಾಮಗಾರಿ, ವಾರ್ಡ್ ಸಂ.39ರ ವ್ಯಾಪ್ತಿಯ ಕೋಟೆ ಪ್ರದೇಶದಲ್ಲಿ ರಸ್ತೆ ಸುಧಾರಣಾ ಕಾಮಗಾರಿ, ವಾರ್ಡ್ ಸಂ.25ರ ವ್ಯಾಪ್ತಿಯಲ್ಲಿ ಬರುವ ರೇಡಿಯೋ ಪಾರ್ಕ್‍ನ ಟಿಸಿಎಚ್ ತರಬೇತಿ ಶಾಲೆಯ ಒಳಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

Also read: ಈಗ ಲೋಕಸಭಾ ಚುನಾವಣೆ ನಡೆದರೆ ಎನ್’ಡಿಎ-ಯುಪಿಎ ಎಷ್ಟು ಸ್ಥಾನ ಗೆಲ್ಲಲಿದೆ ಗೊತ್ತಾ?










Discussion about this post