ಕಲ್ಪ ಮೀಡಿಯಾ ಹೌಸ್
ಬಳ್ಳಾರಿ: ಥರ್ಮಲ್ ವಿದ್ಯುತ್ ಕೇಂದ್ರದಲ್ಲಿ(ಬಿಟಿಪಿಎಸ್) 60 ಕ್ಕೂ ಹೆಚ್ಚು ಸಿಬ್ಬಂದಿಗಳು ಕೊರೋನಾ ವೈರಸ್ ಗೆ ಸಿಲುಕಿರುವುದು ದೃಡಪಟ್ಟಿದೆ. ಇದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿ ಆತಂಕ ಮತ್ತು ಕಳವಳವನ್ನು ಉಂಟುಮಾಡುತ್ತಿದೆ.
ಬಿಟಿಪಿಎಸ್ ಕೇಂದ್ರದಲ್ಲಿರುವ ಮೂರು ಘಟಕಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಆದೇಶದಂತೆ ಆಡಳಿತ ಮಂಡಳಿಯು ಶೇ.50ರಷ್ಟು ಉದ್ಯೋಗಿಗಳನ್ನು ಮತ್ತು ಕಾರ್ಮಿಕರನ್ನು ಮಾತ್ರ ಕೆಲಸಕ್ಕೆ ಕರೆದು ಕೆಲಸ ನಿರ್ವಹಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರೂ ಸಹ ಈ ಕಾರ್ಯವಿಧಾನವನ್ನು ಜಾರಿಗೊಳಿಸದಿರುವುದು ಸಿಬ್ಬಂದಿಗಳಲ್ಲಿ ಆತಂಕವನ್ನು ಉಂಟುಮಾಡಿದೆ.
ಕೊರೋನಾ ಎರಡನೇ ಅಲೆಯು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚು ಹೆಚ್ಚು ಹರಡುತ್ತಿರುವುದರಿಂದ, ರಾಜ್ಯ ಸರ್ಕಾರವು ಎಲ್ಲಾ ವಿದ್ಯುತ್ ಸ್ಥಾವರ ಮತ್ತು ಇತರ ಎಲ್ಲ ಇಲಾಖೆಗಳಿಗೆ ಶೇ.50ರಷ್ಟು ಸಿಬ್ಬಂದಿಯನ್ನು ನಿಯೋಜಿಸಲು ಮತ್ತು ಪಾಳಿಯಲ್ಲಿ ಕೆಲಸ ಮಾಡಲು ಸುತ್ತೋಲೆ ಹೊರಡಿಸಿದೆ. ಲಾಕ್ಡೌನ್ ನಿಯಮಗಳು ಜಾರಿಯಲ್ಲಿದ್ದರೂ ಸಹ ಇದು ನಮ್ಮ ಬಿಟಿಪಿಎಸ್ ಸ್ಥಾವರಕ್ಕೆ ಅನ್ವಯಿಸುವುದಿಲ್ಲ ಎಂದು ಬಿಟಿಪಿಎಸ್ ಸಿಬ್ಬಂದಿ ಆರೋಪಿಸಿದ್ದಾರೆ.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post