ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಬಳ್ಳಾರಿ ಹೊರವಲಯದ ಕೊಳಗಲ್ ಏರ್‍ಸ್ಟ್ರೀಪ್ ಬಳಿ ಇದೇ ಸೆ.17ರಂದು ಬೃಹತ್ ಯೋಗಾಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಗಿನ್ನೆಸ್ ಹಾಗೂ ವಿಶ್ವ ದಾಖಲೆ ನಿರ್ಮಾಣಕ್ಕಾಗಿ ರಾಜ್ಯದಾದ್ಯಂತ ಏಕಕಾಲಕ್ಕೆ ಯೋಗಾಭ್ಯಾಸ ನಡೆಯಲಿದೆ. ಬಳ್ಳಾರಿಯಲ್ಲಿ ನಡೆಯಲಿರುವ ಯೋಗಭ್ಯಾಸ ಕಾರ್ಯಕ್ರಮದಲ್ಲಿ 20 ಸಾವಿರ ಯೋಗಾಸಕ್ತರು ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಭರದಿಂದ ಕೈಗೊಳ್ಳುತ್ತಿದೆ.
ಈ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಯಶಸ್ವಿಯಾಗಿ ಜರುಗುವ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಬೃಹತ್ ಯೋಗಾಥಾನ್ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯ್ತಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಆಯುμï ಇಲಾಖೆ,ಆಯುμï ಟಿವಿ,ನೆಹರು ಯುವ ಕೇಂದ್ರ ಹಾಗೂ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಯೋಗಾಥಾನ್ ಕಾರ್ಯಕ್ರಮವನ್ನು ಸೆ.17ರಂದು ಬೆಳಗ್ಗೆ 9ಕ್ಕೆ ಬಳ್ಳಾರಿಯ ಕೊಳಗಲ್ ಏರ್‍ಸ್ಟ್ರೀಪ್ ಆವರಣದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.ಜಿಲ್ಲೆಯಲ್ಲಿ ಕಡ್ಡಾಯವಾಗಿ 20 ಸಾವಿರ ಜನರು ಈ ಯೋಗಾಥಾನ್‍ದಲ್ಲಿ ಪಾಲ್ಗೊಳ್ಳಬೇಕು;ಪಾಲ್ಗೊಳ್ಳುವವರು ಕಡ್ಡಾಯವಾಗಿ ನೋಂದಣಿಯಾಗಿರಬೇಕು;ನೋಂದಣಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಶಾಲಾ-ಕಾಲೇಜುಗಳ ಪ್ರಾಂಶುಪಾಲರು,ಶಿಕ್ಷಕರು ಅಗತ್ಯ ಕ್ರಮಕೈಗೊಳ್ಳಬೇಕು;ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ಉದಾಸೀನತೆ ಮಾಡುವಂತಿಲ್ಲ ಎಂದು ಅವರು ಸೂಚನೆ ನೀಡಿದರು.
ಇಡೀ ರಾಜ್ಯದಲ್ಲಿಯೇ ಅತ್ಯಂತ ಯಶಸ್ವಿಯಾಗಿ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಜರುಗಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಯೋಗ ತರಬೇತಿ ಸಂಸ್ಥೆಗಳಿವೆ,ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು. ಆಯುμï ವೈದ್ಯಕೀಯ ವಿದ್ಯಾರ್ಥಿಗಳು, ಎನ್.ಎಸ್.ಎಸ್.ಸ್ವಯಂ ಸೇವಕರು ,ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿನ್ನೆಸ್ ಹಾಗೂ ವಿಶ್ವದಾಖಲೆ ನಿರ್ಮಾಣದ ಬೃಹತ್ ಕಾರ್ಯದಲ್ಲಿ ನಾವೆಲ್ಲ ಪಾಲುದಾರರಾಗಬೇಕು ಎಂದು ಮನವಿ ಮಾಡಿದರು.

*ಪ್ರತಿ ಸಾವಿರ ಯೋಗಾಸಕ್ತರಿಗೆ ಒಂದು ಚೌಕ್;ಅದಕ್ಕೆ ಇಬ್ಬರು ತರಬೇತುದಾರರು: ಪ್ರತಿ ಸಾವಿರ ಯೋಗಾಸಕ್ತರಿಗೆ ಒಂದು ಚೌಕ(ಬಾಕ್ಸ್‍ಗಳು)ಗಳನ್ನು ಗುರುತಿಸಲಾಗುತ್ತಿದ್ದು,ಪ್ರತಿ ಬಾಕ್ಸ್‍ಗೆ ಇಬ್ಬರು ಯೋಗ ತರಬೇತುದಾರರು ಇರಲಿದ್ದಾರೆ. ಅವರು ಬೃಹತ್ ಯೋಗಾಥಾನ್‍ಗಾಗಿ ಸಿದ್ದಪಡಿಸಿದ ನಿಯಮಾನುಸಾರ ಯೋಗಾಸನಗಳನ್ನು 45 ನಿಮಿಷಗಳ ಕಾಲ ತಿಳಿಸಿಕೊಡಲಿದ್ದಾರೆ;ಅದರಂತೆ ಯೋಗಾಸಕ್ತರು ಮಾಡಬೇಕು ಎಂದು ಅವರು ಹೇಳಿದರು.
20 ಸಾವಿರ ಯೋಗಾಸಕ್ತರಿಗೆ 20 ಬಾಕ್ಸ್‍ಗಳು ಹಾಗೂ ಯೋಗ ತರಬೇತಿ ನೀಡುವವರಿಗೆ ಚಿಕ್ಕದಾದ ವೇದಿಕೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕಡ್ಡಾಯವಾಗಿ ನೋಂದಣಿಯಾಗುವುದನ್ನು ಇದೇ ಸಂದರ್ಭದಲ್ಲಿ ಪಾಲಿಸುವಂತೆ ಅವರು ಸೂಚಿಸಿದರು ಯೋಗಥಾನ್-2022 ವೆಬ್‍ಸೈಟ್: https://play.google.com/store/apps/details… ರಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.
Also read: ಕರಾವಳಿಯ 3 ಜಿಲ್ಲೆಗಳಲ್ಲಿ ರೆಡ್, ಶಿವಮೊಗ್ಗ ಸೇರಿ 5 ಜಿಲ್ಲೆಗಳಲ್ಲಿ ನಾಳೆ ಆರೆಂಜ್ ಅಲರ್ಟ್
ದಾಖಲೆ ನಿರ್ಮಿಸಲು ನಡೆಯುತ್ತಿರುವ ಈ ಯೋಗಾಥಾನ್‍ನಲ್ಲಿ ಭಾಗವಹಿಸಲು ಕುಶಲಕೋಶ ಮೊಬೈಲ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.ಯೋಗ ಸಂಸ್ಥೆಗಳು ಅಥವಾ ವೈಯಕ್ತಿಕವಾಗಿಯೂ ಆಸಕ್ತರು ಭಾಗವಹಿಸಿ,ಗಿನ್ನೆಸ್ ಬುಕ್ ಆಫ್ ರೆಕಾಡ್ರ್ಸ್ ಸಂಸ್ಥೆಯ ಸೂಚನೆಯಂತೆ ಯೋಗಾಸಕ್ತರು ಸಮಯಪಾಲನೆ, ಆವರಣಕ್ಕೆ ಪ್ರವೇಶಿಸುವ ಹಾಗೂ ಹೊರಗಡೆ ತೆರಳುವ ಎರಡೂ ಮಾರ್ಗಗಳಲ್ಲಿ ಪಾಲ್ಗೊಂಡವರ ನೋಂದಣಿ ,ಪರಿಶೀಲನೆ ನಡೆಯುತ್ತದೆ.ಭಾಗವಹಿಸಿದವರ ಸಂಖ್ಯೆಯನ್ನು ನಿಖರವಾಗಿ ದಾಖಲಿಸಿಕೊಳ್ಳಲು ಈ ಕ್ರಮವಹಿಸಲಾಗುತ್ತಿದೆ ಎಂದರು.

ಯೋಗಾಥಾನ್ ನಡೆಯುವ ಸ್ಥಳದಲ್ಲಿ ವಿವಿಧ ಇಲಾಖೆಗಳ ಮಳಿಗೆಗಳನ್ನು ಹಾಕಿ ಯೋಜನೆಗಳ ಕುರಿತು ಅರಿವು ಮೂಡಿಸಲಾಗುತ್ತಿದ್ದು,ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಮಳಿಗೆಗಳನ್ನು ಹಾಕುವಂತೆ ಅವರು ಸೂಚನೆ ನೀಡಿದರು.
ಯೋಗಾಥಾನ್ ಕಾರ್ಯಕ್ರಮದ ಯಶಸ್ವಿ ಸಂಘಟನೆಗೆ ರಚಿಸಲಾಗಿರುವ ಪ್ರಚಾರ ಸಮಿತಿ,ವೇದಿಕೆ ಸಮಿತಿ, ಆಹಾರ ಸಮಿತಿ, ಕಾರ್ಯಕ್ರಮ ಸಂಘಟನಾ ಸಮಿತಿ, ಸಾರಿಗೆ ಸಮಿತಿ ಸೇರಿದಂತೆ ವಿವಿಧ ಸಮಿತಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ಇದೇ ಸಂದರ್ಭದಲ್ಲಿ ನೀಡಿದರು.

ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನ್ಸೂರ್ ಅಲಿ,ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರಿಸಿಂಗ್ ರಾಠೋಡ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರೆಹಮತ್‍ಉಲ್ಲಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು,ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.









Discussion about this post