ಕಲ್ಪ ಮೀಡಿಯಾ ಹೌಸ್ | ಬೆಳ್ತಂಗಡಿ |
ಚಾಲಕನ ನಿಯಂತ್ರಣ ತಪ್ಪಿ ಆಟೊ ರಿಕ್ಷಾವೊಂದು ಮೃತ್ಯುಂಜಯ ನದಿಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಮುಂಡಾಜೆ ಕಾಪು ಎಂಬಲ್ಲಿ ನಡೆದಿದೆ.
ಕಕ್ಕಿಂಜೆ ಕತ್ತರಿ ಗುಡ್ಡೆ ನಿವಾಸಿ ಸಫಿಯಾ(57) ಮೃತ ಮಹಿಳೆಯಾಗಿದ್ದು, ತಡ ರಾತ್ರಿ 11 ಗಂಟೆ ಸುಮಾರಿಗೆ ಮುಂಡಾಜೆಯಿಂದ ಕಕ್ಕಿಂಜೆ ಕಡೆಗೆ ಹೋಗುತ್ತಿದ್ದ ರಿಕ್ಷಾ, ಕಾಪು ಚಡಾವು ಹತ್ತಿರ ಚಾಲಕನ ನಿಯಂತ್ರಣ ಕಳೆದು ಕೊಂಡು ನದಿಗೆ ಉರುಳಿ ಬಿದ್ದಿದೆ. ಕಿಂಡಿಅಣೆಕಟ್ಟುಗಳಲ್ಲಿ ನೀರು ನಿಂತಿರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದ ಪರಿಣಾಮ ಮಹಿಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇನ್ನಿಬ್ಬರು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Also read: ಅನಿಯಮಿತ ರಾಸಾಯನಿಕ ಆಹಾರ ಸೇವನೆ ಆರೋಗ್ಯಕ್ಕೆ ಮಾರಕ: ಎಸ್‌ಪಿ ಮಿಥುನ್ ಕುಮಾರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post