ಕಲ್ಪ ಮೀಡಿಯಾ ಹೌಸ್ | ಬೇಲೂರು | ರಘುನಂದನ್ ಎಸ್ ಎ
ವಿಪ್ರ ಸಮುದಾಯಕ್ಕೆಂದೇ ಮೀಸಲಾದ ಹೊಸ ಡಿಜಿಟಲ್ ಮಾಧ್ಯಮ ವೇದಿಕೆ, “ವಿಪ್ರ ವಾರ್ತೆ ಡಿಜಿಟಲ್ ಮೀಡಿಯಾ” #Vipra Varthe Digital Media ವಿಕಾಸ ಬೇಲೂರು ಹಬ್ಬ 2025 ಸಮಾರಂಭದಲ್ಲಿ ಶುಭಾರಂಭಗೊಂಡಿತು.
ಈ ಮಹತ್ವದ ಸಂದರ್ಭದಲ್ಲಿ, ನೂತನ ಡಿಜಿಟಲ್ ಸುದ್ದಿ ವಾಹಿನಿಯ ಲೋಗೋವನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಯೋಜಕರು, ಇದು “ಹೊಸತನದ ಡಿಜಿಟಲ್ ವಿಡಿಯೋ” ಅನುಭವವನ್ನು ನೀಡಲಿದೆ ಎಂದು ತಿಳಿಸಿದರು.
“ವಿಪ್ರರಿಂದ.. ವಿಪ್ರರಿಗಾಗಿ.. ವಿಪ್ರರಿಗೋಸ್ಕರ ಪ್ರಾಪಿತವಾಗಿರುವ ಡಿಜಿಟಲ್ ವಾರ್ತೆ” ಎಂಬ ಘೋಷವಾಕ್ಯದೊಂದಿಗೆ, ಈ ವೇದಿಕೆಯು ವಿಪ್ರ ಸಮುದಾಯಕ್ಕೆ ಸಂಬಂಧಿಸಿದ ಸುದ್ದಿ, ಮಾಹಿತಿ ಮತ್ತು ಮನರಂಜನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸ್ಪಷ್ಟಪಡಿಸಲಾಯಿತು.
ಸಾಂಪ್ರದಾಯಿಕ ಮಾಧ್ಯಮಗಳೊಂದಿಗೆ ಡಿಜಿಟಲ್ ತಂತ್ರಜ್ಞಾನವನ್ನು ಸಮನ್ವಯಗೊಳಿಸಿ, ವಿಪ್ರ ಸಮುದಾಯಕ್ಕೆ ಸಕಾಲಿಕ ಮತ್ತು ವಿಶ್ವಾಸಾರ್ಹ ಸುದ್ದಿಯನ್ನು ತಲುಪಿಸುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನ ಮಹತ್ವದ್ದಾಗಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post