ಕಲ್ಪ ಮೀಡಿಯಾ ಹೌಸ್ | ಬೆನಕನಕಟ್ಟಿ (ಧಾರವಾಡ) |
‘ಶ್ರೀ ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್’ ಚಿತ್ರನಿರ್ಮಾಣ ಸಂಸ್ಥೆಯ ಅಡಿಯ ನಿರ್ಮಾಣಗೊಳ್ಳುತ್ತಿರುವ ‘ವಿಜಯಪತಾಕೆ’ ಕನ್ನಡ ಚಲನಚಿತ್ರದ ಚಿತ್ರೀಕರಣವು ಕಳೆದೊಂದು ವಾರದಿಂದ ಧಾರವಾಡ , ಬೆನಕನಕಟ್ಟಿ, ನಿಗದಿ ಸುತ್ತಮುತ್ತ ಸದ್ದಿಲ್ಲದೆ ಭರದಿಂದ ಚಿತ್ರೀಕರಣ ನಡೆಸಿದೆ.
ಈಗಾಗಲೇ ಶೇಕಡಾ 80ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಾಗಲಕೋಟ ಜಿಲ್ಲೆಯ ಸಿದ್ದನಕೊಳ್ಳದಲ್ಲೂ ಚಿತ್ರೀಕರಣ ನಡೆಸಿತ್ತು. ಸದ್ಯ ಮಾತಿನ ಭಾಗದ ಚಿತ್ರೀಕರಣವನ್ನು ಸಂಪೂರ್ಣ ಮುಗಿಸುತ್ತೇವೆ. ಹಾಡುಗಳನ್ನು ಗಜೇಂದ್ರಗಡ, ಕಾಲಕಾಲೇಶ್ವರ, ಶಿರ್ಶಿ,ಸಿದ್ದಾಪೂರ, ಜೋಗ, ದಾಂಡೇಲಿ, ಉಳವಿ ಸುತ್ತಮುತ್ತ ನಡೆಸುತ್ತೇವೆ . ಇದರಲ್ಲಿ ಸಂಪೂರ್ಣ ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕದ ಪ್ರತಿಭಾವಂತ ಕಲಾವಿದರೇ ಅಭಿನಯಿಸುತ್ತಿದ್ದಾರೆ. ತಾಂತ್ರಿಕ ವರ್ಗಕೂಡ ಇಲ್ಲಿನವರೇ ಹೆಚ್ಚಿದ್ದಾರೆ ಎಂದು ನಿರ್ದೇಶಕ ಆರ್.ಶೈನ್ ತಿಳಿಸಿದ್ದಾರೆ.
ನಾಯಕನಟನಾಗಿ ಆರ್.ಶೈನ್, ನಾಯಕಿಯಾಗಿ ರಾಘವಿ ಗೌಡ ,ಖಳನಾಯಕನಾಗಿ ಪಾಲಾಕ್ಷ ಉಳಿದಂತೆ ಬಸವರಾಜ್ ಮೇತ್ರಿ, ಹರೀಶ ಪತ್ತಾರ್, ರಾಜಕುಮಾರ ಪಾಟೀಲ್, ನೇತ್ರಾ ಕಲ್ಲೂರು, ಸಂಗನಗೌಡ ಕುರುಡುಗಿ, ಕೆ.ಆನಂದ ಬಿಜಾಪುರ, ಡಾ.ಪತ್ತೆಖಾನ್, ಪ್ರಕೃತಿ, ರಮಜಾನಸಾಬ ಉಳ್ಳಾಗಡ್ಡಿ, ಗಾಯತ್ರಿ ಹವಳೆ, ತೋಫಿಕ ರೋಣ, ವಿದ್ಯಾ ಹಿರೇಮಠ ಹಾಗೂ ಇನ್ನಿತರರು ಅಭಿನಯಿಸುತ್ತಿದ್ದಾರೆ.
Also read: ಕೆಲ ಕಿಡಿಗೇಡಿಗಳಿಂದ ಅರಣ್ಯ ನಾಶ: ಹಲಸಿನಕೊಪ್ಪ ಗ್ರಾಮಸ್ಥರ ಆಕ್ರೋಶ
ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಗಿರೀಶ ಶಿರಗನಹಳ್ಳಿ, ಸಹ ಛಾಯಾಗ್ರಹಣ ಸಿದ್ದೇಶ ಅಶ್ವ, ಸಂಕಲನ ಸಿದ್ದಾರ್ಥ ಜಾಲಿಹಾಳ, ಸಂಗೀತ ರಾಘವ್ ಸುಭಾಷ್, ಸಾಹಿತ್ಯ ಸುಭಾಷ್ ಬೆಟಗೇರಿ, ಪ್ರಸಾಧನ ಶ್ರೀಕಾಂತ ಕುಲಕರ್ಣಿ, ವಸ್ತ್ರಾಲಂಕಾರ ಶ್ರೀಕಾಂತ, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ ,ಡಾ. ವೀರೇಶ ಹಂಡಗಿ , ಸಹ ನಿರ್ದೇಶನ ಶ್ರೀನಿವಾಸ್ ಪ್ರಸಾದ, ನಿರ್ದೇಶನ ಆರ್.ಶೈನ್ ಅವರದಿದೆ. ಚಿತ್ರಕ್ಕೆ ಷಣ್ಮುಖಪ್ಪ ಆರ್.ಎಲ್ ಹಾಗೂ ಸಹನಿರ್ಮಾಪಕರಾಗಿ ರವಿಚಂದ್ರ ಆನೆಹೊಸೂರು ಬಂಡವಾಳ ಹೂಡಿದ್ದಾರೆ.


ವರದಿ: ಡಾ.ಪ್ರಭು ಗಂಜಿಹಾಳ, ಮೊ-9448775346
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















