ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಣ್ಣ ಹಚ್ಚೋದು ನಮ್ಮ ತಂದೆಯಿಂದ ಬಂದಿರುವ ಬಳವಳಿ. ನಟನೆ ಮಾಡುವುದಷ್ಟೇ, ನಮಗೆ ರಾಕೀಯ ಬೇಡ ಎಂದು ನಟ ಶಿವರಾಜ್ ಕುಮಾರ್ Actor Shivarajkumar ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ DCMDKShivakumar ಆಹ್ವಾನ ನೀಡಿದ ಬೆನ್ನಲ್ಲೆ ಅದನ್ನು ನಟ ಶಿವರಾಜ್‌ಕುಮಾರ್ ನಯವಾಗಿ ತಿರಸ್ಕರಿಸಿ ನಮ್ಮದೇನಿದ್ದರೂ ಮೇಕಪ್ ಹಾಕೋದು ಸಿನಿಮಾ ಮಾಡೋದು. ನಮ್ಮ ತಂದೆ ಕೊಟ್ಟಿರುವ ಬಳುವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ರಾಜಕೀಯ ನಮಗೆ ಬೇಡ ಎಂದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ Bangarappa ಮಗಳು ನಮ್ಮ ಮನೆ ಸೊಸೆ. ಗೀತಾಳಿಗೆ Geetha Shivarajkumar ರಾಜಕೀಯದಲ್ಲಿ ಆಸಕ್ತಿ ಇದ್ದರೆ ಮಾಡಲಿ, ಹೆಂಡತಿ ಇಷ್ಟಪಟ್ಟರೆ ಅವರಿಗೆ ಬೆಂಬಲ ನೀಡುವುದು ಗಂಡನ ಕರ್ತವ್ಯ. ಗೀತಾ ಇಷ್ಟಪಟ್ಟರೆ ಪ್ರೋತ್ಸಾಹ ನೀಡುತ್ತೇವೆ ಎಂದು ತಿಳಿಸಿದರು. ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post