ಬೆಂಗಳೂರು: ವಿಶೃತ ಸ್ಕೂಲ್ ಆಫ್ ಫರ್ಪಾಮಿಂಗ್ ಆರ್ಟ್ಸ್ ಗುರು ಬಿ.ಕೆ. ವಸಂತಲಕ್ಷ್ಮೀರವರ ಶಿಷ್ಯೆ ಕುಮಾರಿ ದಿಶಾ ಡಿ ಭಟ್ ಅವರ ರಂಗಪ್ರವೇಶ ನೃತ್ಯರಂಜನಿ ಕಾರ್ಯಕ್ರಮ ಎಪ್ರಿಲ್ 7ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಜಯನಗರ 8ನೆಯ ಬ್ಲಾಕ್‌ನಲ್ಲಿರುವ ಜೆ.ಎಸ್.ಎಸ್ ಆಡಿಟೋರಿಯಂನಲ್ಲಿ ಸಂಜೆ 5.45ಕ್ಕೆ ನಡೆಯಲಿದೆ.
ಕೇಶವ ಕಾಲೇಜ್ ಆಫ್ ಮ್ಯೂಸಿಕ್ ಮತ್ತು ಡ್ಯಾನ್ಸ್‌ನ ನಿರ್ದೇಶಕ ಮತ್ತು ಪ್ರಾಂಶುಪಾಲ ಕರ್ನಾಟಕ ಕಲಾಶ್ರೀ ಡಾ. ಬಿ.ಕೆ. ಶ್ಯಾಮಪ್ರಕಾಶ್, ಖ್ಯಾತ ಭರತನಾಟ್ಯ ಕಲಾವಿದ ಕರ್ನಾಟಕ ಕಲಾಶ್ರೀ ಸತ್ಯನಾರಾಯಣ ರಾಜು, ಮುದ್ರಿಕ ಫೌಂಡೇಷನ್ ಫಾರ್ ಇಂಡಿಯನ್ ಫರ್ಪಾಮಿಂಗ್ ಆರ್ಟ್ಸ್‌ನ ಕಲಾತ್ಮಕ ನಿರ್ದೇಶಕಿ ಮಿನಾಲ್ ಪ್ರಭು ಮತ್ತು ಕಲಾ ವಿಮರ್ಶಕಿ ವೈ.ಕೆ. ಸಂಧ್ಯಾಶರ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ನಟುವಾಂಗದಲ್ಲಿ ಗುರು ಬಿ.ಕೆ. ವಸಂತಲಕ್ಷ್ಮೀ, ಗಾಯನದಲ್ಲಿ ಭಾರತಿ ವೇಣುಗೋಪಾಲ್, ಮೃದಂಗದಲ್ಲಿ ಜನಾರ್ಧನರಾವ್, ಕೊಳಲು ನರಸಿಂಹಮೂರ್ತಿ ಮತ್ತು ವೈಯಲಿನ್‌ನಲ್ಲಿ ಶ್ರೀನಿಧಿ ಸಾಥ್ ನೀಡಲಿದ್ದಾರೆ.
ಪ್ರಭಾ ಹೆಗಡೆ ಮತ್ತು ದಿವಾಕರ್ ಭಟ್ ಪುತ್ರಿ ಕುಮಾರಿ ದಿಶಾಭಟ್ ಬಾಲ್ಯದಲ್ಲೇ ನೃತ್ಯಾಭ್ಯಾಸವನ್ನು ಆರಂಭಿಸಿ ವಿಶೃತ ಸ್ಕೂಲ್ ಆಫ್ ಫರ್ಪಾಮಿಂಗ್ ಆರ್ಟ್ಸ್‌ನಲ್ಲಿ ಗುರು ಬಿ.ಕೆ. ವಸಂತಲಕ್ಷ್ಮೀ ರವರ ಶಿಷ್ಯೆಯಾಗಿ ಕಲಿತು ಇದೀಗ ರಂಗಪ್ರವೇಶ ಮಾಡಿ ನಾಟ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆಯ ಕನಸನ್ನು ಹೊತ್ತಿರುವ ಈಕೆಗೆ ಕಲಾಸಕ್ತರು ಹೆಚ್ಚಿನ ಪ್ರೋತ್ಸಾಹ ನೀಡಬೇಕಿದ್ದು, ಇವರ ಪ್ರಯತ್ನಗಳಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಹ ಶುಭ ಹಾರೈಸುತ್ತದೆ.
Discussion about this post