ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಲಲಿತ್ ಅಶೋಕ್ ಪಂಚತಾರಾ ಹೋಟೆಲಿನಲ್ಲಿ, 2024ನೇ ಸಾಲಿನ “ಮಿಸ್ ಇಂಡಿಯಾ” #MissIndia ಮತ್ತು ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆ #BeautyContest ಜರುಗಿತು.
ರಾಷ್ಟ್ರ ಮಟ್ಟದ ಈ ಸ್ಪರ್ಧೆ ಸೌಂದರ್ಯ ತಜ್ಞೆ ನಂದಿನಿ ನಾಗರಾಜ್ ಮಾರ್ಗದರ್ಶನದಲ್ಲಿ ನಡೆಯಿತು.
ವಿವಿಧ ರಾಜ್ಯಗಳ 60 ಸುಂದರಿಯರು ಪಾಲ್ಗೊಂಡ ಈ ಸ್ಪರ್ಧೆಯಲ್ಲಿ, ಶಮಾಲಿ, ಸ್ವಾತಿ ಸಜ್ಜನ್,ಇಂದೂ, ಸ್ವಾತಿ ರಾಹುಲ್, ಸುಜಾತಾ ಹಾಗೂ ದಿವ್ಯಾ ಶೆಟ್ಟಿ ‘ಮಿಸೆಸ್ ಇಂಡಿಯಾ -2024’ ಟೈಟಲ್ ಮುಡಿಗೇರಿಸಿಕೊಂಡರು.
‘ಮಿಸೆಸ್ ಇಂಡಿಯಾ ಕ್ಲಾಸಿಕ್ -2024’ ಕೆಟಗರಿಯಲ್ಲಿ ಡಾ. ರೂಪಾ ಹಾಗೂ ಸಹ್ರಾ ವಿಜೇತರಾದರು. ಜ್ಯೋತಿ ಮೆನನ್ ‘ಮಿಸೆಸ್ ಇಂಡಿಯಾ ಸೂಪರ್ ಕ್ಲಾಸಿಕ್ ‘ ವಿಭಾಗದಲ್ಲಿ ಬಹುಮಾನ ಪಡೆದರು.
Also Read: ಶಿವಮೊಗ್ಗ | ಪಾಲಿಕೆ ಬಜೆಟ್ ಸಲಹೆ ಸಭೆ | ಸಮಸ್ಯೆಗಳ ಬಗ್ಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ
ವೇದ ಅವರು ಮಿಸೆಸ್ ಇಂಡಿಯಾ ಕರ್ವಿ ವಿಶೇಷ ವಿಭಾಗದಲ್ಲಿ ವಿಜೇತರಾದರು. ‘ಮಿಸ್ ಇಂಡಿಯಾ 2024’ ವಿಭಾಗದಲ್ಲಿ ದೇವಂಶಿ ಕವನ ಮತ್ತು ಜೆನ್ನಿಫರ್ ವಿಜೇತರು ಎಂದು ತೀರ್ಪುಗಾರರ ಮೆಚ್ಚುಗೆ ಪಡೆದರು.
ಮುಂದಿನ ಹಂತದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಈ ಸಾರಿ ವಿಜೇತರಾದವರಿಗೆ ನೇರ ಅವಕಾಶ ಕಲ್ಪಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post