ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾಟ್ಯೇಶ್ವರ ನೃತ್ಯ ಶಾಲೆಯ ಗುರುಗಳಾದ ಕಲಾಯೋಗಿ ಕೆ.ಪಿ. ಸತೀಶಬಾಬು ಹಾಗೂ ವಾಣಿ ಸತೀಶಬಾಬು ಆಯೋಜಿಸಿದ್ದ ನಾಟ್ಯೇಶ್ವರ ನೃತ್ಯ ಶಾಲೆಯ 17ನೇ ವಾರ್ಷಿಕೋತ್ಸವ-2025 ಜ.19ರಂದು ವಯ್ಯಾಲಿಕಾವಲಿನಲ್ಲಿರುವ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಗುರುಗಳಾದ ಕಲಾಯೋಗಿ ಕೆ.ಪಿ. ಸತೀಶ್ ಬಾಬು ಅವರೊಟ್ಟಿಗೆ ನೃತ್ಯ ಶಾಲೆಯ ಕಿರಿಯ ಹಾಗೂ ಹಿರಿಯ ಶಿಷ್ಯ ವೃಂದ ಹಾಗೂ ಇತರ ಮೂರು ನೃತ್ಯ ಶಾಲೆಗಳಾದ ಮಂದಿರ ನೃತ್ಯ ಶಾಲೆ, ಸೂರ್ಯೋದಯ ನೃತ್ಯ ಶಾಲೆ ಮತ್ತು ಭುವನೇಶ್ವರಿ ನೃತ್ಯಾಲಯದ ತಂಡದವರಿಂದ ಅಮೋಘವಾದ ನೃತ್ಯ ಪ್ರಸ್ತುತಿ ಜರುಗಿತು.
Also Read>> ಜೈವಿಕ ಎಥೆನಾಲ್, ಡೀಸಲ್, ಬಯೋಗ್ಯಾಸ್ ಹೇಗೆ ತಯಾರಾಗುತ್ತದೆ? ಇದರ ಪ್ರಯೋಜನಗಳೇನು?
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಶೆಟ್ಟಿ, (ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರು) ಹಾಗೂ ಸೌಮ್ಯ ಶ್ರೀಕಾಂತ್ (ರೋಟೇರಿಯನ್ ಇಂದಿರಾನಗರ) ಆಗಮಿಸಿದ್ದರು.
ಟಿಟಿಡಿ ವತಿಯಿಂದ ಧಾರ್ಮಿಕ ಕಾರ್ಯಕ್ರಮಗಳು
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಜನವರಿ 21 ರಿಂದ 23ರ ಪ್ರತಿದಿನ ಸಂಜೆ 6-00ಕ್ಕೆ ಶ್ರೀ ವಾಸವಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಡಾ. ಗೀತಾ ರಮೇಶ್ ಇವರಿಂದ ದೇವಿ ಭಾಗವತ ಧಾರ್ಮಿಕ ಪ್ರವಚನ ನಡೆಯಲಿದೆ.
ಜನವರಿ 24, ಶುಕ್ರವಾರ ಸಂಜೆ 6-30ಕ್ಕೆ ಶ್ರೀಮತಿ ಭವಾನಿ ಎಂ. ರಾವ್ ಮತ್ತು ಸಂಗಡಿಗರಿಂದ ಹರಿನಾಮ ಸಂಕೀರ್ತನೆ ರಾಜಾಜಿನಗರದ ಮರಿಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post