ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆರೋಗ್ಯ ತಪಾಸಣೆ ಕ್ಷೇತ್ರದಲ್ಲಿ ಹೊಸ ಪರಿಕಲ್ಪನೆಯ `ಸ್ಮಾರ್ಟ್ ಕ್ಲಿನಿಕ್’ ಗೆ #SmartClinic ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ಚಾಲನೆ ನೀಡಲಾಯಿತು.
ಬಿಬಿಎಂಪಿ ಮಾಜಿ ಮೇಯರ್ ಬಿ.ಎಸ್. ಸತ್ಯನಾರಾಯಣ(ಕಟ್ಟೆ ಸತ್ಯ) ನೂತನ ಸ್ಮಾರ್ಟ್ ಕ್ಲಿನಿಕ್ ಉದ್ಘಾಟಿಸಿದರು.
ಸುಮಾರು ಅರವತ್ತು ಖಾಯಿಲೆಗಳನ್ನು ತಪಾಸಣೆ ಮಾಡುವ ಹಾಗೂ ವೈದ್ಯರ ಸಲಹೆ ನೀಡುವ ಸ್ಮಾರ್ಟ್ ಕ್ಲಿನಿಕ್ ಬಗ್ಗೆ ಸತ್ಯನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

ರೆಸ್ಟೋ ಹೆಲ್ತ್ ಕೇರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಕಟ್ಕೆ ಮಾತನಾಡಿ, ಮುಂದಿನ ಒಂದುವರೆ ವರ್ಷದಲ್ಲಿ ಹದಿನೆಂಟು ಸ್ಮಾರ್ಟ್ ಕ್ಲಿನಿಕ್ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಪಾಲಿಕೆಯ ಮಾಜಿ ಸದಸ್ಯ ಎನ್.ಆರ್. ರಮೇಶ್, ಸಹಾಯಕ ಔಷಧಿ ನಿಯಂತ್ರಣ ಅಧಿಕಾರಿಗಳಾದ ಎ.ಎಂ. ಸ್ಯಾನೋಫರ್, ಸಿ. ಮಂಜುಳಾ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post