ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸುರಾನಾ ಕಾಲೇಜಿನ #SuranaCollege ರ‍್ಯಾಲಿ ವಿದ್ಯಾರ್ಥಿನಿಯರು ಇಂದು ಬೈಕ್ ರ‍್ಯಾಲಿ #BikeRally ಆಯೋಜಿಸಿ ಸಮಾನತೆಯ ಸಂದೇಶ ಸಾರುವ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.
Also Read: ಸಹ್ಯಾದ್ರಿ ಕಾಲೇಜು ವಾಟ್ಸಪ್ ಗ್ರೂಪಲ್ಲಿ ಪಾಕ್ ಧ್ವಜ ಬಿತ್ತರಿಸಿದ ವಿದ್ಯಾರ್ಥಿಗಳ ವಿರುದ್ಧ ದೂರು
ಸೌತ್ ಎಂಡ್ ಸರ್ಕಲ್ ಬಳಿಯಿರುವ ಸುರಾನಾ ಕಾಲೇಜಿನ ಬಳಿಯಿಂದ ಪ್ರಾರಂಭವಾದ ಬೈಕ್ ರ‍್ಯಾಲಿಗೆ ಮೈಕ್ರೋ ಲ್ಯಾಬ್‌ನ ಸಿಎಂಡಿ ದಿಲೀಪ್ ಸುರಾನಾ ಹಾಗೂ ದೇಶದ ಹೈಜಂಪ್ ಕ್ರೀಡಾಪಟು ಸಹನಾ ಕುಮಾರಿ ಚಾಲನೆ ನೀಡಿದರು.
ನೂರಕ್ಕೂ ಹೆಚ್ಚು ಬೈಕ್‌ಗಳ ಮೇಲೆ ಬ್ರೇಕ್ ದ ಬಯಾಸ್ ಭಿತ್ತಿಪತ್ರಗಳನ್ನು ಹಿಡಿದುಕೊಂಡಂತಹ ವಿದ್ಯಾರ್ಥಿನಿಯರು ತಂಡವನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ನ್ಯಾಷನಲ್ ಬೈಕ್ ರೇಸರ್ ಆದಂತಹ ಐಶ್ವರ್ಯಾ ಪಿಸೆ ಅವರು ನಗರದ ವಿವಿಧ ಭಾಗಗಳಲ್ಲಿ ಮುನ್ನಡೆಸಿದರು. ಮಹಿಳಾ ಮತ್ತು ಪುರುಷ ಸಮಾನತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
Also Read: International Women’s Day: Surana students hit the streets in Bengaluru
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೈಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಕ್ರೀಡಾಪಟು ಸಹನಾ ಕುಮಾರಿ ಮಾತನಾಡಿ, ಅಮಿತವಾದ ಉತ್ಸಾಹ ಹಾಗೂ ಪರಿಶ್ರಮದಿಂದ ಮಹಿಳೆಯರು ಏನನ್ನು ಬೇಕಾದರೂ ಸಾಧಿಸಬಹುದಾಗಿದೆ. ಆ ಸಾಧನೆಯನ್ನು ಮಾಡುವಂತಹ ಅಮಿತ ಉತ್ಸಾಹವನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post