ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಜರಂಗದಳದ ಕಾರ್ಯಕರ್ತನ್ನು ಮುಸ್ಲಿಂ ಗೂಂಡಾಗಳು ಹತ್ಯೆ ಮಾಡಿದ್ದು, ಇವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆರೋಪ ಮಾಡಿದ್ದಾರೆ.
Also Read: ಭದ್ರಾವತಿಯಲ್ಲೂ ಎರಡು ದಿನ ನಿಷೇಧಾಜ್ಞೆ: ಇಂದು ಶಾಲಾಗಳಿಗೆ ರಜೆ ಘೋಷಣ
ಈ ಕುರಿತಂತೆ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಹತ್ಯೆಗೊಳಗಾದ ಬಜರಂಗದಳ ಕಾರ್ಯಕರ್ತ ಉತ್ತಮ ಸಂಸ್ಕೃತಿಯ ಮತ್ತು ಒಳ್ಳೆಯ ಕಾರ್ಯಕರ್ತನಾಗಿದ್ದ. ಆತನಿಗೆ ಇನ್ನೂ ಮದುವೆಯೂ ಆಗಿರಲಿಲ್ಲ, ಪ್ರಚೋದನಕಾರಿ ರೀತಿಯಲ್ಲಿ ನಡೆದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ, ಇದು ವೈಯಕ್ತಿಕ ಹಿನ್ನೆಲೆ ಹತ್ಯೆ ಎನ್ನುತ್ತಾರೆ ಆದರೆ ಇದೊಂದು ಬೇರೆ ರೀತಿಯ ಹತ್ಯೆಯಾಗಿದೆ ಎಂದಿದ್ದಾರೆ.

Also Read: ಧರ್ಮಾತೀತವಾಗಿ ಆರೋಪಿಗಳಿಗೆ ಶಿಕ್ಷೆಯಾಗಲಿ: ಹರ್ಷ ಹತ್ಯೆ ಬಗ್ಗೆ ಶಾಸಕ ಸಂಗಮೇಶ್ವರ ಆಗ್ರಹ
ಡಿ.ಕೆ. ಶಿವಕುಮಾರ್ ಪ್ರಚೋದನಕಾರಿ ಹೇಳಿಕೆಯಿಂದ, ಶಿವಮೊಗ್ಗದ ಮುಸ್ಲಿಂ ಗೂಂಡಾಗಳಿಗೆ ಕುಮ್ಮಕ್ಕು ಬಂದಂತಾಗಿದೆ. ಸುರತ್ಕಲ್’ನಿಂದ ಕೇಸರಿ ಶಾಲು ಧರಿಸಿದ್ದರು, ಕೇಸರಿ ಶಾಲು ಹಂಚುತ್ತಿದ್ದಾರೆ ಎಂಬ ಹೇಳಿಕೆಯನ್ನು ಡಿಕೆಶಿ ಆಡಿದ್ದರು ಎಂದಿದ್ದಾರೆ.
ಈ ಕೊಲೆಯನ್ನು ಮುಸಲ್ಮಾನ ಗೂಂಡಾಗಳಿಗೆ ಮಾಡಿದ್ದಾರೆ. ಇಂತಹ ಗೂಂಡಾಗಳನ್ನು ನಾವು ಎಂದಿಗೂ ಬಿಡಲ್ಲ. ಶಿವಮೊಗ್ಗದಲ್ಲಿ ಮುಸ್ಲಿಂ ಗೂಂಡಾಗಳು ಎಂದು ಅವರು ಬಾಲ ಬಿಚ್ಚಿರಲಿಲ್ಲ ಆದರೆ ಇದೀಗ ಬಿಚ್ಚಿದ್ದಾರೆ. ಸಂಪೂರ್ಣ ತನಿಖೆಯನ್ನು ಕೈಗೊಂಡಿದ್ದೇವೆ, ಯಾರೇ ಆಗಲಿ ಅವರನ್ನು ಬಂಧಿಸುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















