ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಬನಶಂಕರಿ 3ನೆಯ ಹಂತದ ಜನತಾ ಬಜಾರ್ ಸಮೀಪದ ಕತ್ತರಿಗುಪ್ಪೆಯ ಕೆ.ಎಸ್. ನರಸಿಂಹಸ್ವಾಮಿ ಉದ್ಯಾನವನದಲ್ಲಿ 72 ನೆಯ ಗಣರಾಜ್ಯೋತ್ಸವದ ಪ್ರಯುಕ್ತ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವ ಸಲುವಾಗಿ ಸುಮಾರು 20 ವರುಷಗಳ ಕಾಲ ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮೇಲುಕೋಟೆಯ ನರಸಿಂಹ ಆಚಾರ್ ಮತ್ತು ವೆಂಕಟೇಶ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೇಲುಕೋಟೆಯ ನರಸಿಂಹ ಆಚಾರ್ ಅವರು, ಇಂದಿನ ಯುವ ಜನಾಂಗ ಸೇನೆ ಸೇರುವ ಮೂಲಕ ದೇಶದ ರಕ್ಷಣೆಗೆ ಟೊಂಕಕಟ್ಟಿ ನಿಲ್ಲಬೇಕು ಎಂದರು.
ಹಿರಿಯರ ಚಾವಡಿಯ ಅಧ್ಯಕ್ಷರಾದ ಚೆನ್ನೇಗೌಡ ಹಾಗೂ ಗೌರವ ಅಧ್ಯಕ್ಷರಾದ ಟಿ.ಎನ್. ಶತ್ರುಘ್ನ ಮತ್ತು ಖಜಾಂಚಿ ಎನ್.ಎಸ್. ಸತೀಶ್ ಕುಮಾರ್ ಹಾಗೂ ಹಿರಿಯರ ಚಾವಡಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪುಟ್ಟ ಶಂಕರಯ್ಯ ಸ್ವಾಗತ ಭಾಷಣ ಮಾಡಿ, ವಿಶ್ವನಾಥ್ ವಂದಿಸಿದರು.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post