ಹುಲಿ ಬಂತು ಹುಲಿ ಎಂಬ ಕತೆ ಕೇಳಿದ್ದೇವೆ ಅಲ್ಲವಾ… ಹಾಗೆಯೇ ಆಗಿದೆ ಬೆಂಗಳೂರು #Bengaluru ಜಲಮಂಡಳಿಯ ಕತೆ…
ಬನಶಂಕರಿ ಬಳಿಯ ಗುರುದತ್ತ ಬಡಾವಣೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ನಮ್ಮ ಬಡಾವಣೆಯ ನೀರಿನ ಸಮಸ್ಯೆಯ ಭಾಗವಾದ ನೀರು ಬಾರದ ಹಿನ್ನೆಲೆಯಲ್ಲಿ ಜಲಮಂಡಳಿಯ ಸಿಬ್ಬಂದಿಗೆ ಕರೆ ಮಾಡಿದರೆ ಪ್ರತಿಕ್ರಿಯೆ ದೊರೆಯಲಿಲ್ಲ. ಆನಂತರ 4ನೇ ತಿರುವಿನಲ್ಲಿ ನೀರು ಬರುತ್ತದೆಯೇ ಎಂಬ ಸಂದೇಶಕ್ಕೆ ಸಂಜೆ 7ಕ್ಕೆ ಎಂಬ ಉತ್ತರ ಬಂದಿತ್ತು.
ಆದರೆ, ರಾತ್ರಿ 7ಕ್ಕೆ ಗುರುದತ್ತ ಬಡಾವಣೆಯ 4ನೇ ತಿರುವಿನಲ್ಲಿ ಒಂದು ಹನಿಯು ನೀರು ಸಹ ಬರಲಿಲ್ಲ ಎಂಬುದು ವಿಪರ್ಯಾಸ. ಈ ಕುರಿತು ಅವರಿಗೆ ಕರೆ ಮಾಡಿದಾಗ 4ನೇ ತಿರುವಿನ ಬಲ ಬದಿ ನೀರು ಬಿಡಲಾಗಿದೆ , ಮತ್ತೆ ಎಡ ಬದಿಗೆ ಬಿಡಲಾಗುತ್ತದೆ ಎಂಬ ಹಾರಿಕೆ ಉತ್ತರ ದೊರೆಯಿತು. ಆದರೆ ಬಡಾವಣೆಯ 4ನೇ ತಿರುವು ಇರುವುದಯ ಎಡ ಬದಿಯಲ್ಲಿ ಸ್ವಾಮಿ ಎಂದು ಮಾತುಗಳು ಮುಂದುವರೆದಾಗ, ರಾತ್ರಿ 9 ಕ್ಕೆ ಚಿಕ್ಕ ಚಿಕ್ಕ ಹನಿ ಹನಿ ನೀರು ಬರುತ್ತೆ. ಮತ್ತೆ ನಾಳೆ ಬೆಳಗಿನ ಜಾವ ಕಾವೇರಿ ನದಿ ಉಗಮ ಆಗುತ್ತದೆ ಎಂಬ ರೀತಿಯಲ್ಲಿ ಸಮಾಧಾನ ಪಡಿಸುವ ಪ್ರಯತ್ನ ರೋಹಿತ್ ಅವರದ್ದು. ಆದರೆ ಬಡಾವಣೆಯಲ್ಲಿ ಶುರುವಾಗಿದೆ ಜಲಕಂಠಕ ಸಮಸ್ಯೆ ಎನ್ನಬಹುದೇ??
ಈ ಸಮಸ್ಯೆಯ ಕುರಿತಾಗಿ ಎಕ್ಸ್ ಸಾಮಾಜಿಕ ಜಾಲತಾಣದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಸಹ ತರಲಾಗಿದೆ.
Discussion about this post