ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ #RenukaswamyMurderCase ಸಂಬಂಧಿಸಿದಂತೆ ಎ2 ಆರೋಪಿ ದರ್ಶನ್ ಹಾಗೂ ಪಟಾಲಂನ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಗೊಂಡಿದೆ.
ಈ ಕುರಿತಂತೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದ್ದು, ಸೆಪ್ಟೆಂಬರ್ 9ರವರೆಗೂ ನ್ಯಾಯಾಂಗ ಬಂಧನದ #JudicialCustody ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಆರೋಪಿಗಳನ್ನು ಪುನಃ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡರು. ಮನವಿ ಪುರಸ್ಕರಿಸಿದ ನ್ಯಾಯಾಧೀಶರು ದರ್ಶನ್ ಮತ್ತು ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಮತ್ತೆ ಆದೇಶ ಹೊರಡಿಸಿದ್ದಾರೆ.
ನ್ಯಾಯಾಂಗ ಬಂಧನ ವಿಸ್ತರಣೆಗೊಂಡ ಬೆನ್ನಲ್ಲೇ ದರ್ಶನ್ #ActorDarshan ಅವರನ್ನು ಇಂದು ಸಂಜೆ ಅಥವಾ ರಾತ್ರಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಶಿರಾ ತುಮಕೂರು ಮಾರ್ಗವಾಗಿ ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಕರೆ ತರಲಾಗುತ್ತದೆ ಎಂದು ವರದಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್’ಐಆರ್ ದಾಖಲಾಗಿದ್ದು, ವಿಚಾರಣೆ ನಡೆದಿದೆ. ಈ ಘಟನೆ ದರ್ಶನ್’ಗೆ ಕುತ್ತು ತರಲಿದೆ ಎಂದು ಹೇಳಲಾಗಿದೆ.
ಆರೋಪಿಗಳ ಸ್ಥಳಾಂತರಕ್ಕೆ ನ್ಯಾಯಾಲಯ ಅನುಮತಿ, ಇಂದು ಶಿಫ್ಟ್
ಇನ್ನು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ2 ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ರಾಜ್ಯ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡುವಂತೆ ನ್ಯಾಯಾಲಯ ನಿನ್ನೆ ಆದೇಶಿಸಿದೆ.

ಯಾರ‍್ಯಾರು ಯಾವ ಜೈಲಿಗೆ?
- ನಟ ದರ್ಶನ್ ಹಾಗೂ ಪ್ರದೋಷ್: ಬಳ್ಳಾರಿ ಕೇಂದ್ರ ಕಾರಾಗೃಹ
- ಪವನ್, ರಾಘವೇಂದ್ರ, ನಂದೀಶ್: ಮೈಸೂರು ಕಾರಾಗೃಹ
- ಜಗದೀಶ್ ಮತ್ತು ಲಕ್ಷö್ಮಣ್: ಶಿವಮೊಗ್ಗ ಕಾರಾಗೃಹ
- ಧನರಾಜ್: ಧಾರವಾಡ ಕಾರಾಗೃಹ
- ವಿನಯ್: ವಿಜಯಪುರ ಕಾರಾಗೃಹ
- ನಾಗರಾಜ್: ಗುಲ್ಬರ್ಗಾ (ಕಲಬುರಗಿ) ಕಾರಾಗೃಹ
- ಎ1 ಪವಿತ್ರಾ, ಅನುಕುಮಾರ್, ರವಿಶಂಕರ್, ದೀಪಕ್ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಮುಂದುವರಿಕೆ
- ಈಗಾಗಲೇ ತುಮಕೂರು ಜೈಲಿನಲ್ಲಿ 4 ಜನ ಇದ್ದಾರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post