ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಟನ ತರಂಗಿಣಿ ಅಕಾಡೆಮಿ ಆಯೋಜಿಸಿರುವ ನಟನ ತರಂಗಿಣಿ ನವರಾತ್ರಿ ಉತ್ಸವ ಯಶಸ್ವಿಯಾಗಿ ನಡೆಯುತ್ತಿದ್ದು, ಎರಡು ಹಾಗೂ ಮೂರನೇ ದಿನದ ಕಾರ್ಯಕ್ರಮಗಳು ಕಲಾ ರಸಿಕರ ಮನಗೆದ್ದವು.
ನವರಾತ್ರಿಯ ಮೊದಲ ದಿನದ ಉತ್ತಮ ಪ್ರಾರಂಭದ ನಂತರ ಎರಡನೆಯ ದಿನಕ್ಕೆ ಪಾದಾರ್ಪಣೆ ಮಾಡುತ್ತಾ ಮತ್ತೋರ್ವ ಉದಯೋನ್ಮುಖ ಕಲಾವಿದೆ, ಕು. ಮೃದುಲಳ ಕರ್ನಾಟಕ ಸಂಗೀತ ಹಾಡುಗಾರಿಕೆ ವಿನಿಕೆಯಾಯಿತು.
ಇವರಿಗೆ ಪಕ್ಕವಾದ್ಯದಲ್ಲಿ ಕು. ಎನ್.ಆರ್. ಸಮನ್ವಿತ ವೀಣೆಯಲ್ಲಿ ಹಾಗೂ ದ್ವಂದ್ವ ಮೃದಂಗ ವಾದನದಲ್ಲಿ ನಾಗದೀಪಾ ಹಾಗೂ ಅಜಾಂಕ್ ಸಹಕಾರ ನೀಡಿ ಕಛೇರಿಯ ಮೆರಗನ್ನು ಹೆಚ್ಚಿಸಿದರು.ಕೂರ್ಮಾವತಾರಿಯಾಗಿ ಆ ದಿನ ವಿಜೃಂಭಿಸಿದ ಶ್ರೀವೆಂಕಟೇಶ್ವರನ ಆಶೀರ್ವಾದ ಈ ಎಲ್ಲ ಕಲಾವಿದರಿಗೆ ಸದಾ ಇರಲಿ ಎಂದು ಆಶಿಸುತ್ತ, ಮೂರನೇ ದಿನದ ಕಾರ್ಯಕ್ರಮದ ಸಂಭ್ರಮದ ಕುರಿತು ಕೆಲವು ಮಾಹಿತಿಗಳು.
ಮೂರನೆಯ ದಿನ ಶ್ರೀವೆಂಕಟೇಶ್ವರ ಸ್ವಾಮಿಯು ಮೋಹಿನಿ ಅಲಂಕಾರದಲ್ಲಿ ಅದ್ಭುತವಾಗಿ ಕಂಗೊಳಿಸಿತು. ನಟನ ತರಂಗಿಣಿಯ ವಿದ್ಯಾರ್ಥಿನಿಯರ ಮಾಧುರಿ ತಂಡ ಕರ್ನಾಟಕ ಭಕ್ತಿ ಸಂಗೀತದಲ್ಲಿ ಸ್ತೋತ್ರಗಳು, ದಾಸರ ಪದಗಳು, ನಾಮ ಸಂಕೀರ್ತನೆಗಳು, ಭಜನೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.
ಪುಟಾಣಿಗಳು ಹಾಗೂ ಹಿರಿಯ ಮಕ್ಕಳು ಕುಮಾರಿಯರಾದ ಎಸ್. ಸಮನ್ವಿತ, ಎನ್.ಆರ್. ಸಮನ್ವಿತ, ವಿದ್ಯಶ್ರೀ, ಸುಪ್ರಿಯ, ಹರಿಪ್ರಿಯ, ಶ್ಲೋಕ, ಇನಿಯ, ಶ್ರೇಯ, ಲಕ್ಷ್ಮೀ, ಅನಘ, ಭಾವನ, ಸಾನ್ವಿಕ, ವರ್ಣಿಕ ಹಾಗೂ ಕುಮಾರ ಸಂಕೇತ್ ಅವರುಗಳು ಸುಶ್ರಾವ್ಯವಾಗಿ ಹಾಡಿದರು. ಇವರಿಗೆ ವೀಣೆಯಲ್ಲಿ ಕು. ಹರಿಣಿ ಭಾರದ್ವಾಜ್, ಮೃದಂಗದಲ್ಲಿ ಕು. ಅಜಾಂಕ್ ದೀಪ್ ಸಹಕಾರ ನೀಡಿದರು.
ಮಕ್ಕಳು ಸುಮಾರು ಎರಡು ಗಂಟೆಗಳ ಶಕ್ತಿಯುತ ಪ್ರದರ್ಶನ ನೀಡಿದ್ದು, ಪ್ರೇಕ್ಷಕರ ಕರತಾಡನದ ಮೆಚ್ಚುಗೆ ಕಲಾವಿದರಿಗೆ ಉತ್ತೇಜಕವಾಗಿತ್ತು.
ಈ ಎಲ್ಲ ಕಲಾವಿದರಿಗೂ ಸಂಗೀತದಲ್ಲಿ ಉತ್ತಮ ಭವಿಷ್ಯ ದೊರಕಲೆಂದು ಹಾರೈಸುತ್ತ ನಾಲ್ಕವೆಯ ದಿನದ ಪ್ರದರ್ಶನವನ್ನು ಕುತೂಹಲದಿಂದ ಎದುರು ನೋಡೋಣವೇ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post