ಕಲ್ಪ ಮೀಡಿಯಾ ಹೌಸ್ | ಕ್ರೀಡಾ ಸುದ್ದಿ |
ಜೆಕೆ ಟೈರ್ ರೇಸಿಂಗ್ ಸೀಸನ್ 2025ರ ರೌಂಡ್ 2 ಸೆಪ್ಟೆಂಬರ್ 27–28 ರಂದು ಕೊಯಮತ್ತೂರಿನ ಪ್ರಸಿದ್ಧ ಕಾರಿ ಮೋಟರ್ ಸ್ಪೀಡ್‌ವೇನಲ್ಲಿ ನಡೆಯಲಿದೆ.
28 ವರ್ಷಗಳಿಂದ ಮೋಟಾರ್ ಸ್ಪೋರ್ಟ್ ಉತ್ತೇಜಿಸುವ ತನ್ನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಜೆಕೆ ಟೈರ್‌ನ, ಭವಿಷ್ಯದ ಭಾರತೀಯ ರೇಸಿಂಗ್ ಪ್ರತಿಭೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿದೆ. ಈ ಬಾರಿ ಮೂರು ವಿಭಾಗಗಳಲ್ಲಿಯೂ ದೇಶದಾದ್ಯಂತದ ಶಕ್ತಿಶಾಲಿ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
ಈ ರೌಂಡ್‌ನಲ್ಲಿ ಪ್ರಥಮ ಬಾರಿಗೆ ಆರಂಭವಾಗುತ್ತಿರುವ ಜೆಕೆ ಟೈರ್ ಲೆವಿಟಾಸ್ ಕಪ್’ನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಕಾರುಗಳನ್ನು ಬಳಸಲಾಗುತ್ತಿದೆ. ಒಟ್ಟು 14 ಚಾಲಕರು ಭಾಗವಹಿಸಲಿದ್ದು, ಹೊಸ ರೇಸರ್‌ಗಳು ಸ್ಪರ್ಧೆಗೆ ಮತ್ತಷ್ಟು ಮೆರಗನ್ನು ನೀಡಲಿದ್ದಾರೆ. ಎಲ್ಲ ಕಾರುಗಳೂ ಒಂದೇ ತರದ ತಾಂತ್ರಿಕ ಸಿದ್ಧತೆಯಲ್ಲಿರುವುದರಿಂದ, ಚಾಲಕರ ಕೌಶಲ್ಯವೇ ಫಲಿತಾಂಶ ನಿರ್ಧರಿಸುವ ಮುಖ್ಯ ಅಂಶವಾಗಲಿದೆ. ಜೆಕೆ ಟೈರ್ ಪ್ರಸ್ತುತಪಡಿಸುವ ರಾಯಲ್ ಎನ್‌ಫೀಲ್ಡ್ ಕಂಟಿನೆಂಟಲ್ GT ಕಪ್ ತನ್ನ ವಿಶಿಷ್ಟ ಪ್ರೊ-ಅ್ಯಾಮ್ ಫಾರ್ಮ್ಯಾಟ್‌ನಲ್ಲಿ ಭಾರೀ ರೋಚಕತೆಯನ್ನು ನೀಡಲಿದೆ. ಪ್ರೊಫೆಷನಲ್ ವರ್ಗದಲ್ಲಿ, ಬೆಂಗಳೂರಿನ ಅನಿಶ್ ಶೆಟ್ಟಿ ರೌಂಡ್ 1 ಗೆದ್ದು 30 ಪಾಯಿಂಟ್‌ಗಳೊಂದಿಗೆ ಮುನ್ನಡೆಯಲ್ಲಿದ್ದಾರೆ.
ಮುಂಬೈನ ಕಯಾನ್ ಪಟೇಲ್ (19) ಮತ್ತು ಪಾಂಡಿಚೇರಿಯ ಚಾಂಪಿಯನ್ ನವನೀತ್ ಕುಮಾರ್ (12) ಇರಲಿದ್ದಾರೆ. ಅಮೆಚೂರ್ ವರ್ಗದಲ್ಲಿ, ಪಾಂಡಿಚೇರಿಯ ಬ್ರಯಾನ್ ನಿಕೋಲಸ್ 36 ಪಾಯಿಂಟ್‌ಗಳೊಂದಿಗೆ ಅಜೇಯ ಸ್ಥಿತಿಯಲ್ಲಿದ್ದರೂ, ಜೋಹ್ರಿಂಗ್ ವಾರಿಸಾ (27) ಮತ್ತು ಸರಣ್ ಕುಮಾರ್ (19) ಬಲವಾದ ಹೋರಾಟ ನೀಡುತ್ತಿದ್ದಾರೆ.
ಜೇಕೆ ಟೈರ್ ನವೀಸ್ ಕಪ್, ಭಾರತದ ಪ್ರವೇಶ ಮಟ್ಟದ ಸಿಂಗಲ್-ಸೀಟರ್ ಸರಣಿಯಲ್ಲಿ (1300cc ಸುಜುಕಿ ಸ್ವಿಫ್ಟ್ ಎಂಜಿನ್‌ಗಳು), ಬೆಂಗಳೂರಿನ ಕಿಶೋರ್ ಭುವನ್ ಬೋನು (Team MSport) ರೌಂಡ್ 1ರಲ್ಲಿ ಅಬ್ಬರಿಸಿ 30 ಪಾಯಿಂಟ್‌ಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಬೆಂಗಳೂರಿನ ಪ್ರತಿಕ್ ಅಶೋಕ್ ಕೇವಲ 17 ಪಾಯಿಂಟ್‌ಗಳಿಂದ ಹಿಂಬಾಲಿಸುತ್ತಿದ್ದು, ನವಿ ಮುಂಬೈನ ಓಜಸ್ ಸರ್ವೆ (15 ಪಾಯಿಂಟ್) ಇಬ್ಬರೂ Team DTS Racing ಪರವಾಗಿ ಬಲವಾದ ಹೋರಾಟ ನೀಡುತ್ತಿದ್ದಾರೆ. ಮೊದಲ ರೌಂಡ್‌ನಲ್ಲಿ ಅವರು ಕೇವಲ ಕೆಲವು ಸೆಕೆಂಡ್‌ಗಳ ಅಂತರದಲ್ಲಿ ಫಿನಿಷ್ ಲೈನ್ ದಾಟಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post