ಬೆಂಗಳೂರು: ಪವರ್’ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಾಲ್ಯ ನಟರಾಗಿ ಅಭಿನಯಿಸಿದ ಬೆಟ್ಟದ ಹೂ ಚಿತ್ರ ಬಿಡುಗಡೆಯಾಗಿ ಇಂದಿಗೆ 34 ವರ್ಷವಾಗಿದ್ದು, ಅಪ್ಪು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿದೆ.

ಪುನೀತ್ ಅಭಿನಯದ 1985ರ ಮಾರ್ಚ್ 22 ರಂದು ಶೇ.50ರಷ್ಟು ತೆರಿಗೆ ವಿನಾಯ್ತಿಯೊಂದಿಗೆ ತೆರೆಗೆ ಬಂದಿತ್ತು. ಸ್ಟೇಟ್ಸ್, ನಂದಾ, ನಳಂದಾ ಸೇರಿದಂತೆ ರಾಜ್ಯದಾದ್ಯಂತ ಅಂದಿನ ಪ್ರಮುಖ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು.

ಅಮೆರಿಕನ್ ಲೇಖಕಿ ಷರ್ಲಿ ಎಲ್ ಅರೋರಾ ಅವರು ಬರೆದಿರುವ ಕಾದಂಬರಿ ಆಧಾರಿತ ಈ ಚಿತ್ರವನ್ನು ಎನ್. ಲಕ್ಷ್ಮೀ ನಾರಾಯಣ್ ನಿರ್ದೇಶಿಸಿ, ಪಾರ್ವತಮ್ಮ ರಾಜಕುಮಾರ್ ನಿರ್ಮಾಣ ಮಾಡಿದ್ದರು. ಮಾಸ್ಟರ್ ಲೋಹಿತ್ ಆಗಿದ್ದ ಇಂದಿನ ಪವರ್’ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಬಾಲ್ಯದಲ್ಲೇ ಈ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು.
















