ವಾಷಿಂಗ್ಟನ್: ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಕಳೆದ ಐದು ವರ್ಷದ ಆಡಳಿತಕ್ಕೆ ಮತ್ತೊಂದು ಗರಿ ನೀಡಿರುವ ಐಎಂಎಫ್, ಭಾರತ ವಿಶ್ವದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ ಎಂದಿದೆ.
ಐಎಂಎಫ್ ಸಂವಹನ ನಿರ್ದೇಶಕಿ ಗೆರ್ರಿ ರೈಸ್ ಅವರು ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಮಾತನಾಡಿದ್ದು, ಕಳೆದ ಐದು ವರ್ಷಗಳಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಮಹತ್ವ ನಿರ್ಧಾರಗಳು ಹಾಗೂ ಪ್ರಮುಖ ಸುಧಾರಣೆಗಳ ಪರಿಣಾಮವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಹೊರಹೊಮ್ಮಿದೆ. ಆದರೆ, ಇದೇ ನಿಟ್ಟಿನಲ್ಲಿ ಇನ್ನೂ ಬಹಳಷ್ಟು ಸುಧಾರಣೆಗಳ ಅಗತ್ಯವಿದೆ ಎಂದಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಭಾರತ ಶೇ.7ರಷ್ಟು ಏರಿಕೆಯಾಗುತ್ತಿದೆ. ಈ ಕಾರಣದಿಂದಾಗಿ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದಿದ್ದಾರೆ.
ಈಗಾಗಲೇ ಜಾರಿಯಾಗಿರುವ ಹಲವು ಪ್ರಮುಖ ಸುಧಾರಣಾ ಯೋಜನೆಗಳಿಂದಾಗಿ ಇಂತಹ ಹಂತಕ್ಕೆ ಭಾರತ ಬೆಳೆದಿದ್ದು, ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಇಂತಹುದ್ದೇ ಶ್ರಮ ಭಾರತಕ್ಕೆ ಅಗತ್ಯವಿದೆ ಎಂದಿದ್ದಾರೆ.
Discussion about this post