ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಹೆಣ್ಣು ಚಿರತೆಯೊಂದು ಸೆರೆ ಸಿಕ್ಕಿದೆ.
ತಾಲೂಕಿನ ಮಾವಿನಕೆರೆ ಬಳಿಯಲ್ಲಿ ಚಿರತೆಯೊಂದು ಪದೇ ಪದೇ ಕಾಣಿಸಿಕೊಂಡಿದ್ದು, ಹಲವು ಸಾಕು ಪ್ರಾಣಿಗಳನ್ನು ತಿಂದಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಸೆರೆ ಸಿಕ್ಕಿರುವ 2 ವರ್ಷದ ಹೆಣ್ಣು ಚಿರತೆ, ಮಾವಿನಕೆರೆ ಬಳಿಯ ತೆಂಗಿನತೋಟದಲ್ಲಿ ಅರಣ್ಯಇಲಾಖೆ ಸಿಬ್ಬಂದಿಗಳು ಬೋನು ಇರಿಸಿದ್ದರು.
Also read: ರಾಮೇಶ್ವರಂ ಕೆಫೆ ಸ್ಪೋಟ | ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹೇಳಿದ್ದೇನು?
ಈ ಚಿರತೆ ಕಳೆದ ಒಂದು ವರ್ಷದಿಂದಲೇ ಈ ಭಾಗದಲ್ಲಿ ಕಾಣಿಸಿಕೊಂಡು, ಕೋಳಿ, ಕುರಿ, ಆಡುಗಳನ್ನು ತಿಂದು ತೇಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮಸ್ಥರ ಮನವಿಯಂತೆ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಇಲ್ಲಿನ ತೆಂಗಿನತೋಟವೊAದರಲ್ಲಿ ಬೋನು ಇರಿಸಿದ್ದರು. ಇಂದು ಆಹಾರ ಅರಸಿ ಬಂದ ಹೆಣ್ಣು ಚಿರತೆ ಬೋನಿನಲ್ಲಿ ಸೆರೆ ಸಿಕ್ಕಿದೆ.
ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ರೇಂಜರ್ ದಿನೇಶ್ ಕುಮಾರ್, ಫಾರೆಸ್ಟರ್ ಅಣ್ಣಾನಾಯ್ಕ, ಸಿಬ್ಬಂದಿಗಳಾದ ಉದಯ್, ಜಯಂತ್, ಸುರೇಶ್, ಗಫೂರ್, ಮಂಜು ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post