ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸುನೀಲ್ ಮತ್ತು ಅನ್ಯ ಕೋಮಿನ ಯುವಕನ ನಡುವೆ ಗಲಾಟೆ ನಡೆದಿದೆ. ಅದಕ್ಕೆ ಬಿಜೆಪಿಯವರು ಕೋಮುಬಣ್ಣ ತುಂಬಿದ್ದಾರೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ MLA Sangameshwar ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಿಗೆ ಜೂಜಾಟ ಆಡಿದ ಮುಬಾರಕ್ ಮತ್ತು ಸುನೀಲ್ ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಬಡಿದಾಡಿಕೊಂಡಿದ್ದಾರೆ. ಆದರೆ ಬಿಜೆಪಿಯವರು ಇದಕ್ಕೆ ಕೋಮು ಬಣ್ಣ ಹಚ್ಚಿದ್ದಾರೆ. ಆತ್ಮಸಾಕ್ಷಿ ಇದ್ದರೆ ಬಿಜೆಪಿಯವರು ವೈಯಕ್ತಿಕವಾಗಿ ನಡೆದ ಗಲಾಟೆಯನ್ನು ಕೋಮುಗಲಭೆ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಭದ್ರಾವತಿಯಲ್ಲಿ ಅಭಿವೃದ್ಧಿಪಡಿಸಲು ಸಾಕಷ್ಟು ವಿಷಯಗಳು ಇವೆ. ಅದನ್ನು ಬಿಜೆಪಿ ಅವರು ಮಾಡಲಿ. ಸುಮಾರು 500 ದೇವಸ್ಥಾನಕ್ಕೆ ಅನುದಾನ ನೀಡಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ ಕಾಂಗ್ರೆಸ್ ಕ್ಷೇತ್ರ ಎಂಬ ಕಾರಣಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಐಎಸ್‌ಎಲ್ ಮತ್ತು ಎಂಪಿಯವರು ತಿಂಗಳಾನುಗಟ್ಟಲೆ ಪ್ರತಿಭಟನೆ ನಡೆಸಿದರು. ಒಂದು ದಿನವೂ ಬಾರದ ಮಾಜಿ ಸಚಿವ ಈಶ್ವರಪ್ಪ, ವೈಯುಕ್ತಿಕ ದ್ವೇಷದಿಂದ ಬಡಿದಾಡಿಕೊಂಡ ಸುನೀಲ್ ವಿಚಾರದಲ್ಲಿ ಆಸ್ಪತ್ರೆಗೆ ಭೇಟಿ ನೀಡಿರುವುದರಲ್ಲಿ ರಾಜಕೀಯ ಹಿನ್ನೆಲೆ ಇದೆ. ಭದ್ರಾವತಿ ಜನ ಇಂತಹವರನ್ನ ನಂಬಬಾರದು ಎಂದು ಮನವಿ ಮಾಡಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post