ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಅಕ್ಷಯ ತೃತೀಯದ ಅಂಗವಾಗಿ ನಿನ್ನೆ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೇವರಿಗೆ ವಿಶೇಷ ಅಭಿಶೇಕ ಹಾಗೂ ಅಲಂಕಾರ ಮಾಡಲಾಗಿತ್ತು.
ನಗರದ ವಿವಿಧ ಬಡಾವಣೆಗಳಲ್ಲಿರುವ ದೆವಾಲಯ ಮತ್ತು ಮಠಗಳಲ್ಲಿ ಅಕ್ಷಯ ತೃತೀಯ ಪ್ರಯುಕ್ತ ದೇವರಿಗೆ ಹಾಗೂ ಯತಿಗಳ ಬೃಂದಾವನಕ್ಕೆ ವಿಶೇಷ ಪೂಜೆ ಅಲಂಕಾರವನ್ನು ಮಾಡಲಾಗಿತ್ತು.
ಹಳೇ ನಗರದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ ಅಭಿಷೇಕದ ನಂತರದಲ್ಲಿ ಮುಖ್ಯಪ್ರಾಣದೇವರಿಗೆ ಹಾಗೂ ಶ್ರೀವಾದಿರಾಜ ಸ್ವಾಮಿಗಳ ಮತ್ತು ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಕೇಸರದ್ರವ್ಯ ಯಕ್ತವಾದ ಸುವಾಸನಾ ಭರಿತವಾದ ಶ್ರೀಗಂಧದ ಲೇಪನವನ್ನು ಮಾಡಿ ದ್ರಾಕ್ಷಿ, ಗೋಡಂಬಿಗಳಿAದ ಅಲಂಕಾರ ಮಾಡಿ ನಂತರ ನೈವೇದ್ಯ, ಮಹಾ ಮಂಗಳಾರತಿ ಮಾಡಲಾಯಿತು.
Also read: SSLC ರಿಸಲ್ಟ್ | ರಾಜ್ಯಮಟ್ಟದಲ್ಲಿ ರ‍್ಯಾಂಕ್ ಗಳಿಸಿದ ಕಾರ್ಕಳದ ಕ್ರೈಸ್ಟ್ ಕಿಂಗ್ ಶಾಲೆ
ಶ್ರೀಮಠದ ಪ್ರಧಾನ ಅರ್ಚಕರಾದ ಮಾಧುರಾವ್ ಅವರ ಮರ್ಗದರ್ಶನದಲ್ಲಿ ಈ ಅಲಂಕಾರವನ್ನು ಮಾಡಲಾಯಿತು. ಕಾರ್ಯ ಕ್ರಮದಲ್ಲಿ ಸುಮಾ ರಾಘವೇಂದ್ರ ತಂತ್ರಿ, ಜಯತೀರ್ಥ, ಸುಧೀಂದ್ರ ರಾವ್, ಪ್ರಶಾಂತ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅದೇ ರೀತಿ ಜನ್ನಾಪುರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಮತ್ತು ಸಿದ್ಧಾರೂಢ ನಗರದಲ್ಲಿರುವ ಶ್ರೀನಂಜನಗೂಡು ರಾಯರ ಮಠದಲ್ಲಿ ಸಹ ಗಂಧ ಲೇಪನ ವಿಶೇಷ ಅಲಂಕಾರ, ಪೂಜೆಗಳನ್ನು ಮಾಡಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post