ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ 50ನೇ ವರ್ಷದ ಗಣೇಶೋತ್ಸವದ ರಾಜಬೀದಿ ಉತ್ಸವವವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದ್ದು, ಶಾಂತಿಯಿಂದ ಕೂಡಿದ ವೈಭವದ ಮೆರವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ MLA Sangameshwar ಮನವಿ ಮಾಡಿದರು.
ಗಣಪತಿ ಮೆರವಣಿಗೆ ವೇಳೆ ಕಲ್ಪ ಮೀಡಿಯಾ ಹೌಸ್ ಜೊತೆ ಮಾತನಾಡಿದ ಅವರು, ಈ ಬಾರಿ ೫೦ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದು, ಎಲ್ಲ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಘಟನೆಗಳು, ನಾಗರೀಕರು ಪಾಲ್ಗೊಂಡಿದ್ದು, ಈ ಬಾರಿ ಎಂದಿಗಿಂತ ಹೆಚ್ಚು ಸಂಭ್ರಮ ಮನೆ ಮಾಡಿದೆ.


ಮಗುವನ್ನು ಭುಜದ ಮೇಲೆ ಹೊತ್ತು ನಡೆದ ಶಾಸಕರು:
ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದ ಶಾಸಕ ಬಿ.ಕೆ. ಸಂಗಮೇಶ್ವರ್ ಸಣ್ಣ ಮಗುವನ್ನು ಭುಜದ ಮೇಲೆ ಹೊತ್ತು ಸಂಭ್ರಮಿಸಿದರು. ಹೊಸಮನೆ ನಾಗರಿಕರೊಬ್ಬರ ಸಣ್ಣ ಮಗುವನ್ನು ಎತ್ತಿ ಮುದ್ದಾಡಿರುವ ಅವರು, ಅದನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಡೊಳ್ಳು ಕುಣಿತಕ್ಕೆ ಒಂದೆರಡು ಹೆಜ್ಜೆ ಹಾಕಿದ್ದು, ವಿಶೇಷವಾಗಿತ್ತು. ಮೆರವಣಿಗೆ ವೇಳೆ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.










Discussion about this post