ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾನು ಹೇಳಿದ ಮಾತು ಸರಿಯಾಗಿ ಕೇಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ತಾಳಿ ಕಟ್ಟಿದ ಪತ್ನಿಯ ಮೇಲೆ ಆಸಿಡ್ ಸುರಿದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಬಿಆರ್’ಪಿ ನಿವಾಸಿ ರವಿ ಎಂಬಾತ ಅದೇ ಗ್ರಾಮದ ಯುವತಿಯನ್ನು 12 ವರ್ಷದ ಹಿಂದೆ ವಿವಾಹವಾಗಿದ್ದು, ಇವರಿಗೆ ಮೂವರ ಮಕ್ಕಳಿದ್ದಾರೆ. ಎಲ್ಲವೂ ಸರಿಯಾಗಿದ್ದ ಸಂಸಾರದಲ್ಲಿ ಅನುಮಾನ ಎಂಬ ಹುಳಿ ಬಿದ್ದಿತ್ತು.
ಅನುಮಾನ ಹೆಚ್ಚಾಗಿ ಅದು ವೈಮನಸ್ಯಕ್ಕೆ ತಿರುಗಿತ್ತು. ಇದರಿಂದ ಜಗಳ ಹೆಚ್ಚಾದ ಪರಿಣಾಮ ಒಂದು ವರ್ಷದ ಹಿಂದೆ ತುಮಕೂರಿಗೆ ಹೋದ ರವಿ ಮಗನೊಂದಿಗೆ ಅಲ್ಲೇ ಇದ್ದನು. ಇದರಿಂದ ಜೀವನೋಪಾಯಕ್ಕಾಗಿ ಮಹಿಳೆ ಬೆಂಗಳೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಇಬ್ಬರು ಹೆಣ್ಣುಮಕ್ಕಳನ್ನ ಶಾಂತಿನಗರದಲ್ಲಿ ನೆಲೆಸಿರುವ ತಾಯಿ ಮನೆಯಲ್ಲಿ ಬಿಟ್ಟಿದ್ದರು.
ಬೆಂಗಳೂರಿನಿಂದ ಬಂದು ಆಗಾಗ್ಗೆ ಮಕ್ಕಳನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ಮೊನ್ನೆ ಮಗನೊಂದಿಗೆ ಭದ್ರಾವತಿಗೆ ಬಂದಿದ್ದ ರವಿ ಪತ್ನಿಯ ಮನೆಗೆ ಬಂದಿದ್ದನು. ಆ ವೇಳೆಯೂ ಪತ್ನಿಗೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾನೆ. ನಿನ್ನೆ ಮಹಿಳೆಯ ತಾಯಿ ಮತ್ತು ಮಕ್ಕಳು ಹೊರಗೆ ಹೋದಾಗ ರವಿ ಮದ್ಯ ಸೇವಿಸಿ ಪತ್ನಿಯ ಮನೆಗೆ ಬಂದಿದ್ದಾನೆ. ಗಾರ್ಮೆಂಟ್ಸ್ ಕೆಲಸ ಬೇಡ ನನ್ನೊಂದಿಗೆ ಬಾ ಎಂದು ಕರೆದಿದ್ದಾನೆ. ಗಾರ್ಮೆಂಟ್ಸ್ ಕೆಲಸ ಬಿಟ್ಟು ಮಣ್ಣು ತಿನ್ನಲಾ ಎಂದು ಪತ್ನಿ ಮರು ಪ್ರಶ್ನಿಸಿದ್ದಾಳೆ.
ನಾನು ಕರೆದರೆ ಬರುವುದಿಲ್ಲ ಎಂದು ರೊಚ್ಚಿಗೆದ್ದ ರವಿ ಹೊಗಡೆಯಿಂದ ಬಿಳಿ ಕ್ಯಾನ್ ತಂದು ಅದರಲ್ಲಿದ್ದ ಬಿಳಿದ್ರವ್ಯವನ್ಬ ಪತ್ನಿಯ ಮೈಮೇಲೆ ಎರಚಿದ್ದಾನೆ. ಸುಟ್ಟ ಅನುಭವ ಉಂಟಾಗಿ ಮನೆಯಲ್ಲೇ ಪತ್ನಿ ಬಿದ್ದು ನರಳಿದ್ದಾಳೆ. ಆ ವೇಳೆ ತಾಯಿ ಮತ್ತು ಮಕ್ಕಳು ಹೊರಗಡೆ ಹೋದವರು ಬಂದಿದ್ದಾರೆ. ತಕ್ಷಣವೇ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post