ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಲಾಗಿದ್ದ ಆಶ್ಲೇಷ ಬಲಿ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ನಾಗದೇವರ ಶಾಪ, ನಾಗದೋಷ, ನಾಗುಉಪದ್ರ, ನಾಗಭಯ, ನಾಗಕೋಪ ನಿವಾರಣೆಗೆ, ಆರೋಗ್ಯ ಭಾಗ್ಯ, ಮಾಂಗಲ್ಯ ಭಾಗ್ಯ, ವಿದ್ಯೆ, ಮಂಗಳಕಾರ್ಯಗಳಿಗಾಗಿ ಹಾಗೂ ಸಮಸ್ತ ದೋಷಗಳ ಪರಿಹಾರಕ್ಕಾಗಿ ಶ್ರೀಮಠದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀಮಠದಲ್ಲಿ ಮುಂಜಾನೆಯಿಂದಲೇ ವಾದಿರಾಜರ ಹಾಗೂ ಗುರುರಾಯರ ಬೃಂದಾವನ ಭೂತರಾಜರು ಮತ್ತು ಪ್ರಾಣದೇವರಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಅಲಂಕಾರ ನಡೆಸಲಾಯಿತು.
ಪ್ರಮೋದ್ ಕುಮಾರ್ ಹಾಗೂ ಗೋಪಾಲಾಚಾರ್ ಅವರುಗಳ ನೇತೃತ್ವದಲ್ಲಿ ನಾಗದೇವರ ಮಂಡಲ ಪೂಜೆ ನಡೆಯಿತು. ಆಶ್ಲೇಷ ಪೂಜೆಯ ರಂಗೋಲಿ ಚಿತ್ರಣವನ್ನು ಪ್ರಮೋದ್ ಕುಮಾರ್ ಅವರು ಅತ್ಯಂತ ಸುಂದರವಾಗಿ ಚಿತ್ರಿಸಿದ್ದರು.
ಪ್ರಮುಖ ಸೇವಾಕರ್ತರಾದ ಶಾಸಕ ಬಿ.ಕೆ. ಸಂಗಮೇಶ್ವರ್ ಕುಟುಂಬದವರು, ನಗರದ ಖ್ಯಾತ ಆಡಿಟರ್ ಶ್ರೀಪಾದ, ಹೇಮಂತ್ ಕುಮಾರ್(ಸಿಎಂಸಿ), ಸತೀಶ್, ಚೇತನ್ ಕುಮಾರ್, ಎಂ.ಆರ್. ಮಂಜುನಾಥ್ (ಸಿಎಂಸಿ), ಆರ್.ಎನ್. ಮಂಜುನಾಥ್(ಸಿಎಂಸಿ), ಸತ್ಯನಾರಾಯಣ ಶೆಟ್ಟಿ ತರೀಕೆರೆ, ವಿನಯ್ ಕುಮಾರ್ ಸುಣ್ಣದಹಳ್ಳಿ, ಪವನ್ ಕುಮಾರ್ ಉಡುಪ ಅವರುಗಳು ಪಾಲ್ಗೊಂಡಿದ್ದರು.
ಅಲ್ಲದೇ, ಸತ್ಯನಾರಾಯಣಾಚಾರ್, ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ಮುರಳೀಧರ ತಂತ್ರಿ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ ತಂತ್ರಿ, ಖಜಾಂಚಿ ನಿರಂಜಾನಾಚಾರ್, ಮ್ಯಾನೇಜರ್ ಶ್ರೀಪತಿ, ರಾಘವೇಂದ್ರ, ಶುಭಾ ಗುರುರಾಜ್ ಸೇರಿದಂತೆ ಹಲವರು ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















