ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮೆಸ್ಕಾಂ #MESCOM ಪವರ್ ಮ್ಯಾನ್ ನೋರ್ವನ ಮೇಲೆ ವಿನಾಕಾರಣ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಉಂಬ್ಳೆಬೈಲ್ ರಸ್ತೆ ಮೆಸ್ಕಾಂ ಕಚೇರಿ ಮುಂಭಾಗ ಸಿಬ್ಬಂದಿ ಗಳು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ತಾಲ್ಲೂಕಿನ ಗೋಣಿಬೀಡು ಗ್ರಾಮದ 11 ಕೆವಿ ಮಾರ್ಗದ ಕೆಳಗೆ ಅಪಾಯಕಾರಿಯಾಗಿ ಬೆಳೆಸಿದ್ದ ಅಡಿಕೆ ಗರಿ ತೆರವು ಮಾಡಲು ಸಿಬ್ಬಂದಿ ಚನ್ನೇಶ್ ಗೆ ಅಧಿಕಾರಿಗಳು ತಿಳಿಸಿದ್ದು, ಗ್ರಾಮದ ತೋಟದ ಮಾಲೀಕನ ಮಗ ರಘು ಪ್ರತಿರೋಧ ವ್ಯಕ್ತಪಡಿಸಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಈ ಹಿನ್ನಲೆಯಲ್ಲಿ ಪವರ್ ಮ್ಯಾನ್ ಚನ್ನೇಶ್ ನನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆಸಿ ದೂರು ಸಂಬಂಧ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ಏಕಾಏಕಿ ಅವ್ಯಾಚ ಪದಗಳಿಂದ ನಿಂಧಿಸಿ ಹಲ್ಲೆ ನಡೆಸಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
Also read: ಬಂಗಾರಪ್ಪ ಪುತ್ರಿ, ರಾಜ್ ಸೊಸೆ, ಶಿವಣ್ಣ ಪತ್ನಿ ಎಂದು ಅಭಿಮಾನ ಕೊಡ್ತಾರೆ, ವೋಟ್ ಕೊಡಲ್ಲ: ಮಾಜಿ ಶಾಸಕ ಹಾಲಪ್ಪ
ಕರ್ತವ್ಯದಲ್ಲಿದ್ದು ಹಲ್ಲೆಗೊಳಗಾದ ಚನ್ನೇಶ್ ಗೆ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ತಪ್ಪಿತಸ್ಥ ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ಕ್ರಮಕೈಗೊಳ್ಳುವಂತೆ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯ ಸಂಸ್ಥೆ ಮುಖಂಡರಾದ ಹೇಮಣ್ಣ, ಆನಂದ, ಗುರುಪ್ರಸಾದ್, ಅಧಿಕಾರಿಗಳಾದ ಭೀರಪ್ಪ, ಮುನಾಫ್, ಮಲ್ಲೇಶ್ ನಾಯ್ಕ, ಸಚಿನ್, ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಈ ಸಂಬಂಧ ಬಿಆರ್ ಪಿ ಘಟಕದ ಮೆಸ್ಕಾಂ ಸಹಾಯಕ ಇಂಜಿನಿಯರ್ ಕಿರಣ್ ಕುಮಾರ್ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post