ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮೆಸ್ಕಾಂ ವತಿಯಿಂದ ಭದ್ರಾ ಜನರೇಟಿಂಗ್ ಸ್ಟೇಷನ್‌ನಲ್ಲಿ 66 ಕೆ.ವಿ ಐಸೋಲೇಟರ್‌ಗಳ ಓವರಾಲಿಂಗ್ ಕಾರ್ಯ ಕೈಗೆತ್ತಿಕೊಳ್ಳ ಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಲಕ್ಕವಳ್ಳಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಡಿ.13ರಂದು ವದಿಯೂರು, ಗ್ಯಾರೇಜ್ ಕ್ಯಾಂಪ್, ಸಿಂಗನಮನೆ, ಶಂಕರಘಟ್ಟ,ಕುವೆಂಪು ವಿಶ್ವವಿದ್ಯಾ ಲಯ, ನೆಲ್ಲಿಸರ, ಮಾಳೇನಹಳ್ಳಿ, ಗೋಣಿಬೀಡು, ಶಾಂತಿನಗರ, ತಾವರಘಟ್ಟ, ಮಲ್ಲಿಗೇನ ಹಳ್ಳಿ, ತಮ್ಮಡಿಹಳ್ಳಿ, ಜಂಕ್ಷನ್, ರಂಗನಾಥ ಪುರ, ಹುಣಸೇಕಟ್ಟೆ ಮತ್ತು ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕೆಂದು ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















