ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ಹಳೆನಗರದ ರಾಮೇಶ್ವರ-ಸುಬ್ರಮಣ್ಯ ದೇವಸ್ಥಾನದಲ್ಲಿ ಇಂದು ಚಂಪಾ ಸುಬ್ರಹ್ಮಣ್ಯ ಷಷ್ಠಿ Champa Subramanya Shashti ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಈಶ್ವರನಿಗೆ, ಸುಬ್ರಮಣ್ಯ ದೇವರಿಗೆ ಅಭಿಷೇಕ ನಂತರ ಸುಬ್ರಹ್ಮಣ್ಯ ಹೋಮ ಹಾಗೂ ರಾಮೇಶ್ವರ ದೇವಸ್ಥಾನದಿಂದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದವರೆಗೆ ವಿವಿಧ ಬಜನಾ ಮಂಡಳಿಗಳಿಂದ ಮೆರವಣಿಗೆ ಉತ್ಸವ ಜರಗಿತುನಡೆಯಿತು.
ತದನಂತರ ಬ್ರಹ್ಮಾಚಾರಿ ಪೂಜೆ, ಪೂರ್ಣಾವತಿ ಹಾಗೂ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಭಜನಾ ಮಂಡಳಿಗಳು ಹಾಗೂ ಶ್ರೀ ಕೃಷ್ಣನ ಚೆಂಡೆ ಬಳಗ ಭಾಗವಹಿಸಿದ್ದರು.
Also read: ತಮಿಳುನಾಡಿನ ಹಲವೆಡೆ ಧಾರಾಕಾರ ಮಳೆ: ರಸ್ತೆ, ಸೇತುವೆಗಳು ಜಲಾವೃತ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















