ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ದೇಶ ಸೇವೆಯೇ ಈಶ ಸೇವೆ, ಜನಸೇವೆಯೇ ಜನಾರ್ಧನ ಸೇವೆ. ನೀವೆಲ್ಲಾ ಸೈನಿಕರಾಗಿ ಹೊರಹೊಮ್ಮಿ ಬಂದು ಉಕ್ಕಿನ ನಗರಿ ಆದಂತಹ ಭದ್ರಾವತಿಯ ಋಣವನ್ನು ತೀರಿಸುವ ಯುವಕರು ಆಗಬೇಕು ಎಂದು ಭದ್ರಾವತಿ ತಾಲೂಕು ಮಾಜಿ ಸೈನಿಕ ಸಂಘದ ಗೌರವಾನ್ವಿತ ಅಧ್ಯಕ್ಷ ಮೇಜರ್ ವಿಕ್ರಂ ಕರೆ ನೀಡಿದರು.
ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನೀಡಲಾಗುತ್ತಿರುವ ಭಾರತೀಯ ಭೂ ಸೇನೆಗೆ ಸೇರಲು ಉಚಿತವಾಗಿ ದೈಹಿಕ ಹಾಗೂ ಲಿಖಿತ ಪರೀಕ್ಷೆ ತರಬೇತಿ ಪಡೆಯುತ್ತಿರುವ ಭದ್ರಾವತಿಯ ಯುವಕರಿಗೆ ಹಾಗೂ ಭದ್ರಾವತಿಯ ಗ್ರಾಮಾಂತರ ಯುವಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ಮಾಜಿ ಸೈನಿಕರ ಅವಿರತ ಶ್ರಮಪಟ್ಟು ತಮಗೆ ತರಬೇತಿಯನ್ನು ನೀಡಿದ್ದಾರೆ. ನೀವೆಲ್ಲರೂ ಸಹ ಅವರಿಗೆ ಗುರುದಕ್ಷಿಣೆಯಾಗಿ ನೀಡುವುದಾದರೆ ಪ್ರತಿಯೊಬ್ಬ ಯುವಕರು ಸೈನಿಕರಾಗಿ ಹೊರಹೊಮ್ಮಬೇಕು ಅದೇ ನೀವು ಕೊಡುವಂತಹ ಗುರುದಕ್ಷಿಣೆ ಎಂದು ಸ್ಮರಿಸಿದರು.
ಕಾರ್ಯದರ್ಶಿ ವೆಂಕಟಗಿರಿ ಮಾತನಾಡಿ, ದೇಶ ಸೇವೆ ಮಾಡುವಂತಹ ಸೌಭಾಗ್ಯ ಎಲ್ಲರಿಗೂ ದೊರೆಯುವುದಿಲ್ಲ. ಇಂತಹ ಅವಕಾಶ ನಿಮ್ಮ ಬಳಿಗೆ ಬಂದಿದೆ. ಇದರ ಪರೀಕ್ಷೆಯಲ್ಲಿ ನೀವುಗಳೂ ಯಶಸ್ವಿಯಾಗುವ ಮೂಲಕ ತಾಯಿ ಭಾರತಿಯ ಸೇವೆ ಸೇವೆ ಮಾಡಿ ಎಂದು ಉತ್ತೇಜನಕಾರಿ ಮಾತುಗಳನ್ನಾಡಿದರು.
1965ರ ಯುದ್ದ ದಲ್ಲಿ ಹಾಗೂ 1971ರ ಬಾಂಗ್ಲಾದೇಶದ ವಿಭಜನೆಯ ಯುದ್ಧದಲ್ಲಿ ಪಾಲ್ಗೊಂಡ ಮಾಜಿ ಸೈನಿಕರಾದ ಗೋವಿಂದಪ್ಪ ಅವರು ಮಕ್ಕಳಿಗೆ ಹಿತನುಡಿ ಹೇಳಿದರು.
ಮಾಜಿ ಸೈನಿಕರಾದ ಅಭಿಲಾಶ್ ಮಹೇಶ್ ವೆಂಕಟೇಶ್ ರಮೇಶ್ ರಾಜು ಶ್ರೀನಿವಾಸ್, ಶ್ರೀಧರ್, ಗಿರಿ, ಸುರೇಶ್, ಸಾಲರ್ ಅಹಮ್ಮದ್, ದಿವಾಕರ್, ಕುಮಾರ್ ಇತರೆ ಮಾಜಿ ಸೈನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post