ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ Shri Raghavendra Swamy Mutt ಇಂದು ಆಯೋಜಿಸಲಾಗಿದ್ದ ಆಶ್ಲೇಷ ಬಲಿ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮುಂಜಾನೆ ಬೃಂದಾವನಗಳಿಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರ ನಡೆಯಿತು. ಆನಂತರ ಹೋಮ, ನಾಗದೇವತೆಯ ಪ್ರಾರ್ಥನಾ ಕಾರ್ಯ, ಆಶ್ಲೇಷ ಬಲಿ ಯಶಸ್ವಿಯಾಗಿ ನಡೆಯಿತು.
ಶ್ರೀಗುರುರಾಜ ಸೇವಾ ಸಮಿತಿ ಅಧ್ಯಕ್ಷರಾದ ಮುರಳೀಧರ ತಂತ್ರಿ, ಉಪಾಧ್ಯಕ್ಷರಾದ ಸುಮ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್ ಖಜಾಂಚಿಗಳಾದ ನಿರಂಜನ ಆಚಾರ್, ಪ್ರಮೋದ್ ಅವರ ತಂಡದಿಂದ ನಾಗರಾಧನೆ ಜರುಗಿತು.
Also read: ಕುವೆಂಪು ವಿವಿ: ಪಿಜಿ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ದಿನಾಂಕ ನ.15ರವರೆಗೆ ವಿಸ್ತರಣೆ
ಪವನ್ ಕುಮಾರ್ ಉಡುಪ, ಸುಪ್ರಿತ ತಂತ್ರಿ, ಶುಭ ಗುರುರಾಜ, ವಿದ್ಯಾನಂದ ನಾಯಕ್, ಪ್ರಧಾನ ಅರ್ಚಕರಾದ ಮಾಧವ ರಾವ್, ಪ್ರಶಾಂತ ಪಾಲ್ಗೊಂಡಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















