ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ಶಾಸ್ತ್ರ ಸಂಘದ ವತಿಯಿಂದ SOGS ರಜತ ಸಂಭ್ರಮದ ಅಡಿಯಲ್ಲಿ ‘ಮಹಿಳಾ ಆರೋಗ್ಯ ದೇಶದ ಸೌಭಾಗ್ಯ’ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಹೊಸಸೇತುವೆ ರಸ್ತೆಯ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸ್ತ್ರೀ ರೋಗ ತಜ್ಞೆ ಡಾ:ವೀಣಾ ಭಟ್ SOGS ರಜತ ಸಂಭ್ರಮದ ಅಡಿಯಲ್ಲಿ ‘ಮಹಿಳಾ ಆರೋಗ್ಯ ದೇಶದ ಸೌಭಾಗ್ಯ’ಎಂಬ ವಿಷಯದ ಕುರಿತ ಉಪನ್ಯಾಸ ನೀಡಿದರು.

ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಮತ್ತು ಬಿ ಇಡಿ ಕಾಲೇಜಿನ ಪ್ರಾoಶುಪಾಲ ಡಾ.ಎಸ್ ಪಿ ರಾಕೇಶ್ ಅಧ್ಯಕ್ಷತೆ ವಹಿಸಿದ್ದರು. ಬಿ.ಇಡಿ. ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಶಿವಲಿಂಗೇಗೌಡರು ಸ್ವಾಗತಿಸಿ, ಗ್ರಂಥ ಪಾಲಕರಾದ ಆಶಾ ಪ್ರಾರ್ಥಿಸಿದರೆ, ವೀಣಾ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post