ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೆನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ಧಾತ್ರಿ ಹೋಮ ನಡೆಯಿತು. ಬೆಳಗ್ಗೆ ರಾಯರಿಗೆ ಅಭಿಷೇಕ ತದನಂತರ ವೇದ ಪ್ರಭಾ ಗೋಪಾಲ್ಆಚಾರ್ ಅವರಿಂದ ಹೋಮದ ಕಾರ್ಯಕ್ರಮ ಜರಗಿತು.
ನಿರಂಜನ್ ಆಚಾರ್ ನೇತೃತ್ವದಲ್ಲಿ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮಾಕಾಂತ್, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ, ತಂತ್ರಿ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಚಾರ್ ಹಾಗೂ ಅನೇಕ ಪಂಡಿತರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post