ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ನ್ಯೂಕಾಲೋನಿಯಲ್ಲಿ ವಾಸವಾಗಿರುವ ಕುಸುಮ ಹಾಗೂ ಉಮೇಶ್ ಅವರ ಮನೆಯಲ್ಲಿ ಪ್ರತಿವರ್ಷದಂತೆ ನವರಾತ್ರಿಯ ಪೂಜೆ, ಲಲಿತಾ ಸಹಸ್ರನಾಮ ಮತ್ತು ದಸರಾ ಗೊಂಬೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಕುಸುಮ ಅವರು ಭದ್ರಾವತಿಯ ನ್ಯಾಯಾಂಗ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಪತಿ ಉಮೇಶ್ ವೆಸ್ಟೀಜ್ ಹೆಲ್ತ್ ಕೇರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಬ್ಬರ ಕೆಲಸದ ಒತ್ತಡದ ನಡುವೆಯೂ ದಸರಾ ಗೊಂಬೆಗಳನ್ನು ಪ್ರತಿವರ್ಷ ಜೋಡಿಸುತ್ತಾರೆ.
ಉಮೇಶ್ ಅವರ ತಾ ನಾಗರತ್ನ ಅವರ ಮಾರ್ಗದರ್ಶನದಂತೆ ಮಕ್ಕಳಾದ ಸ್ಕಂದ ಭಾರದ್ವಾಜ್, ಸ್ತುತಿ ಭಾರದ್ವಾಜ್ ಅವರ ಸಹಕಾರದಿಂದ ಕಳೆದ ಇಪ್ಪತ್ತು ವರ್ಷಗಳಿಂದ ಹತ್ತು ದಿನಗಳ ಕಾಲ ದಸರಾ ಉತ್ಸವವನ್ನು ಆಚರಿಸಿಕೊಂಡು ಬಂದಿದ್ದಾರೆ.
ಕುಸುಮ ಅವರು ತಮ್ಮ ತಂದೆ ತಾಯಿಯವರಿಂದ ಈ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರು, ಇವರ ಮನೆಯಲ್ಲಿ ಸುಮಾರು ನೂರೈವತ್ತು ವರ್ಷದ ಹಳೆಯದಾದ ಪಟ್ಟದ ಗೊಂಬೆ ಪ್ರಮುಖ ಆಕರ್ಷಣೆಯಾಗಿದೆ. ಇದರೊಂದಿಗೆ ಅಂಬಾರಿ, ನವದುರ್ಗಾ, ಸಂಗೀತ ವಾದ್ಯಗಳು, ಸಪ್ತಋಷಿ, ಆಚಾರ್ಯ ತ್ರಯರು , ದಶಾವತಾರ, ವಿಶ್ವರೂಪ, ತಿರುಪತಿ ವೆಂಕಟರಮಣ, ಬೆಣ್ಣೆ ಕೃಷ್ಣ, ಲಲಿತಾದೇವಿ, ಅಷ್ಟ ಲಕ್ಷ್ಮಿಯರು, ತ್ರಿಶಕ್ತಿ, ಅನಂತಪದ್ಮನಾಭ, ರುಕ್ಮಿಣಿ ಪಾಂಡುರಂಗ, ಚಾಮುಂಡಿ ಬೆಟ್ಟ, ಗೋಕರ್ಣ, ಗಾಣಗಾಪುರ ದತ್ತಾತ್ರೇಯ, ಧರ್ಮಸ್ಥಳ ಮಂಜುನಾಥ, ವಿಜಯನಗರ ವೈಭವ, ಅನ್ನಪೂರ್ಣೇಶ್ವರಿ, ಬಾಲತ್ರಿಪುರಾಂಬಿಕ, ಉಡುಪಿ ಶ್ರೀಕೃಷ್ಣ, ಇಡಗುಂಜಿ ಗಣಪತಿ, ಶ್ರೀರಂಗಪಟ್ಟಣದ ರಂಗನಾಥ, ರೈತನೇ ದೇಶದ ಬೆನ್ನೆಲುಬು, ವೀರಯೋಧ, ಹಳ್ಳಿ ಮನೆ, ಭದ್ರಾ ಅಭಯಾರಣ್ಯ, ಸಕ್ರೆಬೈಲು ಆನೆ ಬಿಡಾರ, ಗುಡವಿ ಪ್ರತಿವರ್ಷ, ಮತ್ಸ್ಯ ಪ್ರದರ್ಶನ, ಹಳೆ ಕಾಲದ ಅಡುಗೆ ಮನೆ, ಆಧುನಿಕ ಅಡುಗೆಮನೆ, ಹೋಟೆಲ್, ಪದ್ಮನಿಲಯ ಇನ್ನು ವಿವಿಧ ಬಗೆಯ ಗೊಂಬೆಗಳ ಸಂಗ್ರವಿದ್ದು, ಇದನ್ನು ವೀಕ್ಷಿಸಲು ಜನರು ಪ್ರತಿನಿತ್ಯ ಇವರ ಮನೆಗೆ ಧಾವಿಸುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post