ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೇನಗರದ ಬ್ರಾಹ್ಮಣರ ಮನ್ಮಥ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹೋಳಿ ಹಬ್ಬದ Holi ಸಂಭ್ರಮದಲ್ಲಿ ಸ್ಥಳೀಯರು ಮಿಂದೆದ್ದು, ಸಂಭ್ರಮದಿಂದ ಹಬ್ಬ ಆಚರಿಸಿದರು.
ಹಳೇನಗರದ ಬ್ರಾಹ್ಮಣರ ಬೀದಿಯಲ್ಲಿ ರತಿಮನ್ಮಥರನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇಂದು ಮುಂಜಾನೆ ರಾಜಬೀದಿ ಉತ್ಸವ ನಡೆಸಿ, ಕಾಮದಹನ ನಡೆಸಲಾಯಿತು.
Also read: ಶಿವಮೊಗ್ಗ / ಹೊಳಲೂರಿಗೆ ಪ್ರಧಾನಿ ಮೋದಿ ಪ್ರವಾಸ ರದ್ದು, ಜಿಲ್ಲಾ ಪಂಚಾಯತ್ ತಯಾರಿಗೆ ತಣ್ಣೀರು…!
ಇದೇ ವೇಳೆ ಬಣ್ಣದ ಓಕುಳಿ ಎರಚಿಕೊಂಡು ಯುವಕರು ಹಾಗೂ ಸ್ಥಳೀಯರು ಸಂಭ್ರಮಿಸಿದರು. ಸಮಿತಿಯ ಅಧ್ಯಕ್ಷರಾದ ಶ್ರೀ ಶೇಷ, ರಂಗನಾಥ್, ಭಾಸ್ಕರ್, ಸುನೀಲ್, ಮಧು, ಅನಿಲ್, ಉಮೇಶ್, ವಾದಿರಾಜ್ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post