ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲ್ಲೂಕಿನ ಬಾಬಳ್ಳಿ ಗ್ರಾಮದಲ್ಲಿ ಗಂಗಾ ಪೂಜೆ ಮಾಡಲು ಹೋಗಿದ್ದ ಭಕ್ತರ ಮೇಲೆ ಹೆಜ್ಜೇನು ದಾಳಿ #Honey bee attack ನಡೆಸಿದ ಘಟನೆ ನಡೆದಿದೆ.
ಘಟನೆಯಲ್ಲಿ 50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಹಲವರನ್ನ ಶಿವಮೊಗ್ಗ ಹಾಗೂ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Also read: ರಸ್ತೆ ಅಪಘಾತ – ಫೋಟೊಗ್ರಾಫರ್ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ!
ಹೆಜ್ಜೇನುಗಳ ದಾಳಿಯಲ್ಲಿ ಎರಡು ವರ್ಷದ ಮಗು ಸಹ ಸಿಲುಕಬೇಕಿತ್ತು. ಅದೃಷ್ಟಕ್ಕೆ ದೇವರಂತೆ ಬಂದ ಬಾಲಕನೊಬ್ಬ ಮಗುವನ್ನು ಎತ್ತಿಕೊಂಡು ರಕ್ಷಣೆ ಮಾಡಿದ್ದಾನೆ. ಆತನ ಮೇಲೆ ಹೆಜ್ಜೇನು ಬಿಗಿಯಾಗಿ ದಾಳಿ ನಡೆಸಿ ಕಚ್ಚಿದರೂ ಮಗುವನ್ನ ಬಿಡದೇ ರಕ್ಷಣೆ ಮಾಡಿದ ಬಾಲಕನನ್ನ ಸ್ಥಳೀಯರು ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post