ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ 35 ವಾರ್ಡ್ಗಳ ಪೈಕಿ ಬಿಜೆಪಿ ಪಕ್ಷವು 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿತ್ತು. ಇದೀಗ ಉಳಿದ 13 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ.
14 ವಾರ್ಡ್ಗಳ ಪೈಕಿ 1ನೆಯ ವಾರ್ಡ್ ಹೊರತುಪಡಿಸಿ ಉಳಿದ 13 ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಹಾಗೂ ಈ ಹಿಂದಿನ 21 ಅಭ್ಯರ್ಥಿಗಳ ಪಟ್ಟಿಯಲ್ಲಿದ್ದ 2 ವಾರ್ಡ್ಗಳ ಅಭ್ಯರ್ಥಿಗಳನ್ನು ಬದಲಿಸಲಾಗಿದೆ ಎನ್ನಲಾಗಿದೆ.
ವಾಡ್ ನಂ. 5, ಕೋಟೆ ಏರಿಯಾದಿಂದ ಶಶಿಕಲಾ ನಾರಾಯಣ, ವಾರ್ಡ್ ನಂ. 7 ದುರ್ಗಿಗುಡಿ ಹಾಗೂ ಖಲಂದರ್ ನಗರದಿಂದ ಆಟೋ ಮೂರ್ತಿ, ವಾರ್ಡ್ ನಂ.8, ಅನ್ವರ್ಕಾಲೋನಿ, ಸೀಗೆಬಾಗಿಯಿಂದ ಅಮೀರ್ ಪಾಷಾ, ವಾರ್ಡ್ ನಂ.9 ಭದ್ರಾ ಕಾಲೋನಿಯಿಂದ ಗಿರೀಶ್, ವಾರ್ಡ್ ನಂ. 13, ಭೂತನಗುಡಿ ಸುನಿತಾ ಮೋಹನ್, ವಾರ್ಡ್ ನಂ. 16, ಗಾಂಧಿನಗರ ವಿ. ಕದಿರೇಶ್, ವಾಡ್ ನಂ. 17, ನೆಹರೂ ನಗರ ಡಿ.ಎನ್ ರವಿಕುಮಾರ್, ವಾರ್ಡ್ ನಂ. 6, 8, ಮತ್ತು 21, ಎಂಪಿಎಂನಿಂದ ಅನೂಷ, ವಾರ್ಡ್ ನಂ.22, ಉಜ್ಜನಿಪುರ ಭರತ್, ವಾರ್ಡ್ ನಂ. 23, ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ ಸುಮಾ ರಮೇಶ್, ವಾರ್ಡ್ ನಂ. 27, ಆಂಜನೇಯ ಅಗ್ರಹಾರ, ಕೂಲಿ ಬ್ಲಾಕ್ಶೆಡ್ ಶೈಲಾ ರವಿಕುಮಾರ್, ವಾರ್ಡ್ ನಂ. 29, ಕಿತ್ತೂರು ರಾಣಿ ಚೆನ್ನಮ್ಮ-ಎನ್ಟಿಬಿ ಬಡಾವಣೆ ರೂಪಾ ನಾಗರಾಜ್, ವಾರ್ಡ್ ನಂ. 33 ಹುತ್ತಾ ಕಾಲೋನಿ ಶ್ರೀಧರ ಗೌಡ, ವಾಡ್ ನಂ. 34 ಅಪ್ಪರ್ ಹುತ್ತಾ ಕಾಲೋನಿ ಶ್ಯಾಮಲ ಸತ್ಯಣ್ಣ ಹಾಗು ವಾರ್ಡ್ ನಂ. 35 ಭಂಡಾರಹಳ್ಳಿ ಲಕ್ಷ್ಮಮ್ಮ ನರಸಿಂಹ ಗೌಡರನ್ನು ಆಯ್ಕೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post