ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆಯ ಚುನಾವಣೆಗೆ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ಇಂದು 13 ನೇ ವಾರ್ಡಿಗೆ ಸಂಸದ ಬಿ. ವೈ. ರಾಘವೇಂದ್ರ ಭೇಟಿ ನೀಡಿದರು. ಹಾಗೂ ಅವರೊಂದಿಗೆ ಕೆಎಸ್‌ಎಸ್‌ಐಡಿಸಿ ಉಪಾಧ್ಯಕ್ಷ ಎಸ್ ದತ್ತಾತ್ರಿ, ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 13ನೆಯ ವಾರ್ಡ್‌ನ ಅಭ್ಯರ್ಥಿ ಸುನೀತಾ ಮೋಹನ್, ವಾರ್ಡ್ ಪ್ರಮುಖ್ ಹೇಮಾವತಿ ವಿಶ್ವನಾಥ್ ರಾವ್, ಕೌನ್ಸಿಲರ್ ವಿ ಕದಿರೇಶ್, ಭದ್ರಾವತಿ ಕೋಶಾಧ್ಯಕ್ಷ ಸಂಪತ್ ಬಂಟಿಯ, ರಾಜ್ಯ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ನಿಗಮದ ನಿರ್ದೇಶಕರಾದ ಮಂಗೋಟೆ ರುದ್ರೇಶ್ ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post