ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೆನಗರ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ನಕಲಿ ನೋಟು ಜಾಲವನ್ನು ಪತ್ತೆಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ತರೀಕೆರೆಯ ಅರುಣ್ ಕುಮಾರ್ (23), ಶಿವಮೊಗ್ಗ ಹರಿಗೆಯ ಪ್ರೇಮ್ ರಾಜ್ (23) ಎಂಬ ಆರೋಪಿಗಳನ್ನು ಬಂಧಿಸಿರುವ ಹಳೆನಗರ ಠಾಣೆ ಪೊಲೀಸರು ಇವರುಗಳಿಂದ 500ರೂ. ಮುಖಬೆಲೆಯ 182 ನಕಲಿ ನೋಟುಗಳನ್ನು ಹಾಗೂ ನೋಟು ಮುದ್ರಿಸಲು ಬಳಸಿದ್ದ ಪ್ರಿಂಟರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಕಲಂ 489(ಎ)(ಬಿ)(ಸಿ)(ಡಿ) 34ಐಪಿಸಿ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಕಲಿ ನೋಟು ಜಾಲ ವ್ಯಾಪಕವಾಗಿ ಹರಡಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ತನಿಖೆಯನ್ನು ಮುಂದುವರೆಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















