ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ಜಿಂಕ್ ಲೈನ್ ನಲ್ಲಿ ಕಳೆದ 20 ದಿನಗಳಲ್ಲಿ ಮೂರು ರೈತ ಕುಟುಂಬಕ್ಕೆ ಸೇರಿದ 9 ಗೋವುಗಳು ಕೊಟ್ಟಿಗೆಗಳಿಂದ ಕಳ್ಳತನವಾಗಿದೆ. #Cow Theft ಭದ್ರಾವತಿ ನ್ಯೂಟೋನ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದೆ.
ಇಲ್ಲಿಯವರೆಗೂ ಗೋವಿನ ಕಳ್ಳರು ಯಾರೆಂದು ತಿಳಿಯದೆ ಇದ್ದು ಗೋವುಗಳು ಸಿಗದೇ ಗೋವನ್ನೇ ನಂಬಿ ಜೀವನ ಮಾಡುತ್ತಿರುವ ರೈತರು ಜೀವನದ ದಾರಿ ತಿಳಿಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾತ್ರಿ ಇಡೀ ನಿದ್ದೆಗೆಟ್ಟು ಗೋವುಗಳನ್ನು ಕಾಯುವ ಪರಿಸ್ಥಿತಿ ರೈತರಿಗೆ ಉಂಟಾಗಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಗೋವುಗಳು ಸರಣಿ ಕಳ್ಳತನವಾಗುತ್ತಿರುವುದರ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಗೋವನ್ನು ಕಳೆದುಕೊಂಡಿರುವ ರೈತರು ಮತ್ತು ಹಿಂಜಾವೇ ಶಿವಮೊಗ್ಗ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ರವರ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಜವಾಬ್ದಾರಿಯುತ ಕಾರ್ಯಕರ್ತರಾದ ಸುಧೀಂದ್ರ ಸಾಗರ. ಫೋಕಸ್ ಮಂಜಣ್ಣ. ರಕ್ಷಿತ್. ಮತ್ತಿತರರು ಆದಷ್ಟು ಬೇಗ ಗೋಗಳನ್ನು ಪತ್ತೆ ಹಚ್ಚಿ ಕೊಡಬೇಕೆಂದು ಸಂಬಂಧಪಟ್ಟ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















