ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ಶ್ರೀನಿವಾಸ ಕಲ್ಯಾಣ ಸಮಿತಿ ಮತ್ತು ಸಂಕರ್ಷಣ ಧರ್ಮ ಸಂಸ್ಥೆ ಸಹಕಾರದೊಂದಿಗೆ ಸಿದ್ಧಾರೂಢ ನಗರ ಶ್ರೀನಿವಾಸ ದೇವರ ದೇವಸ್ಥಾನದಲ್ಲಿ ಮೇ 11ರ ಬುಧವಾರ ಶ್ರೀನಿವಾಸ ಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ.
ಕಲ್ಯಾಣೋತ್ಸವ ನಿಮಿತ್ತ ಮೇ 8ರ ಶುಕ್ರವಾರದಿಂದ ವಿಶೇಷ ಕಾರ್ಯಕ್ರಮಗಳು ಜರುಗಲಿದ್ದು, 10ರ ಮಂಗಳವಾರ ಸಂಜೆ 6:30ರಿಂದ 8ರವರೆಗೆ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ದಾವಣಗೆರೆಯ ಪಂಡಿತ ವೆಂಟೇಶಾಚಾರ್ಯ ಮಣ್ಣೂರು ಅವರಿಂದ ಶ್ರೀ ವೆಂಕಟೇಶ ಕಲ್ಯಾಣ ಕಥಾನುವಾದ ನಡೆಯಲಿದೆ.

11ರ ಬುಧವಾರಂದು ಸಿದ್ಧಾರೂಢ ನಗರ ಶ್ರೀನಿವಾಸ ದೇವರ ದೇವಸ್ಥಾನದಲ್ಲಿ ಬೆಳಿಗ್ಗೆ 6:30ಕ್ಕೆ ಶ್ರೀ ವೆಂಟೇಶ ಸುಪ್ರಭಾತ ಹಾಗೂ 9 ಗಂಟೆಯಿಂದ ಶ್ರೀನಿವಾಸ ಕಲ್ಯಾಣ ಮಹೋತ್ಸ ನಂತರ ಶ್ರೀ ವೆಂಕಟೇಶ ಕಲ್ಯಾಣ ಕಥಾನುವಾದ ಮಂಗಳ ಮಹೋತ್ಸವ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ವಿಶೇಷ ಪೂಜಾ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
Also read: ಭರದಿಂದ ಸಾಗಿದ ‘ಹುಬ್ಬಳ್ಳಿಯವ’ ಅನಿಮೇಶನ್ ಚಲನಚಿತ್ರ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















