ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹೊಸಮನೆಯ ಕೇಶವಪುರದಲ್ಲಿ ಮನೆಗಳ್ಳತನ ನಡೆದಿದ್ದು, ಸುಮಾರು 1 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವಾದ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ಶಕೀಲ್ ಅಹಮದ್ ಎನ್ನುವವರ ತಮ್ಮ ಸಂಬಂಧಿಯೊಬ್ಬರ ಮದುವೆಗಾಗಿ ಹುಬ್ಬಳ್ಳಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಗಿಲ ಬೀಗ ಮುರಿದು ಕಳ್ಳತನ ನಡೆದಿದೆ.
ಮನೆಯ ಸದಸ್ಯರು ಮರಳಿ ನೋಡಿದಾಗ ಬಾಗಿಲು ಸ್ವಲ್ಪ ತೆರೆದಿತ್ತು. ಅನುಮಾನಗೊಂಡು ಒಳಹೋಗಿ ನೋಡಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ.
Also read: ಶಿವಮೊಗ್ಗ | ರಾತ್ರಿ ತಲ್ವಾರ್ ಹಿಡಿದು ರೌಡಿಗಳ ಅಟ್ಟಹಾಸ | ಕಾರುಗಳ ಗಾಜು ಪುಡಿ ಪುಡಿ
ಕಪಾಟಿನಲ್ಲಿದ್ದ ಅಂದಾಜು 1 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ ಕಳ್ಳರು. ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















