ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯ ಆಧಾರದಲ್ಲಿ ಅಕ್ರಮ ಗೋ ಹತ್ಯೆ #Killing Cow ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, 13 ಎಳೆಯ ಕರುಗಳು ಸೇರಿದಂತೆ 15 ಹಸುಗಳನ್ನು ರಕ್ಷಣೆ ಮಾಡಲಾಗಿದೆ.
ಬೆಳಗ್ಗೆ ಭದ್ರಾವತಿ ತಾಲೂಕು ವೀರಾಪುರ ಗ್ರಾಮದಲ್ಲಿ ನಜೀರ್ ಎಂಬುವರಿಗೆ ಸೇರಿದ ಶೆಡ್ ಒಳಗೆ ಮತ್ತು ಭದ್ರಾವತಿ ನಗರದ ಅನ್ವರ್ ಕಾಲೋನಿಯಲ್ಲಿ ನಡೆಯುತ್ತಿದ್ದ ಅಕ್ರಮ ಗೋ ಹತ್ಯೆ ಅಡ್ಡಗಳ ಮೇಲೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಖಚಿತ ಮಾಹಿತಿಯ ಮೇರೆಗೆ ಹಳೇ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಅಕ್ರಮ ಗೋವಿನ ಕಸಾಯಿಖಾನೆ ಮೇಲೆ ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರ್ ನಾಯಕ್ ರವರ ನೇತೃತ್ವದಲ್ಲಿ ದಾಳಿ ನಡೆಸಿದೆ.
Also read: ಔದ್ಯೋಗಿಕ ಕ್ಷೇತ್ರಕ್ಕೆ ಆಯ್ಕೆಯಾಗಲು ಪದವಿ ಜೊತೆ ಕೌಶಲ್ಯ ಅಭಿವೃದ್ಧಿ ಕೋರ್ಸ್ ಅನಿವಾರ್ಯ
ಈ ವೇಳೆಯಲ್ಲಿ 13 ಎಳೆ ಕರುಗಳು ಮತ್ತು ಎರಡು ಗೋವುಗಳು ಸೇರಿದಂತೆ ಒಟ್ಟು 15 ಗೋವುಗಳ ರಕ್ಷಣೆ ಮಾಡಲಾಗಿದೆ. ಪ್ರತಿಭಟನೆ ಹೋರಾಟ ಮನವಿಗಳನ್ನು ನೀಡಿದರೂ ಸಹ ಭದ್ರಾವತಿಯಲ್ಲಿ ನಿಲ್ಲದೆ ಗೋ ಹತ್ಯೆ ನಡೆಯುತ್ತಿರುವ ವಿಚಾರ ಹಿಂದೂ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದೆ.
ಅಕ್ರಮವಾಗಿ ನಡೆಯುತ್ತಿರುವ ಗೋವುಗಳ ಸಾಗಾಟವನ್ನು ತಡೆಯಬೇಕೆಂದು ಭದ್ರಾವತಿಯ ಎಲ್ಲಾ ಪೊಲೀಸ್ ಠಾಣೆಗಳಿಗೂ ಹಿಂದೂ ಸಂಘಟನೆ ಮುಖ್ಯಸ್ಥರು ಮನವಿ ಸಲ್ಲಿಸಿದ್ದಾರೆ.
ಇದೇ ವೇಳೆ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿ ಗೋವುಗಳನ್ನು ರಕ್ಷಣೆ ಮಾಡಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡಕ್ಕೆ ಹಿಂದೂ ಜಾಗರಣ ವೇದಿಕೆ ಸದಸ್ಯರು ಧನ್ಯವಾದ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post