ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಕಸಾಯಿ ಖಾನೆಗಳು ಮತ್ತು ಅಕ್ರಮ ಗೋಮಾಂಸದ ಹೋಟೆಲ್ ಗಳನ್ನ ತೆರುವುಗೊಳಿಸುವಂತೆ ಹಿಂದು ಜಾಗರಣ ವೇದಿಕೆ ಆಗ್ರಹಿಸಿ ನಗರಸಭೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ ನಗರದಲ್ಲಿ ನಗರಸಭೆ ವ್ಯಾಪ್ತಿಗೆ ಬರುವ ಅನ್ವರ್ ಕಾಲೋನಿ ಬೋಮ್ಮನಕಟ್ಟೆ ಮುಂತಾದ ಸ್ಥಳಗಳಲ್ಲಿ ಅಕ್ರಮ ಕಸಾಯಿ ಕಾನೆಗಳು ಎಗ್ಗಿಲ್ಲದೆ ರಾಜ ರೋಷವಾಗಿ ನಡೆಯುತ್ತಿದೆ. ಮತ್ತು ಅನ್ವರ್ ಕಾಲೋನಿ, ಸೀಗೆಬಾಗಿ, ಖಾಜಿ ಮೊಹಲ್ಲಾ, ಹೊಳೆ ಹೊನ್ನೂರು ಸರ್ಕಲ್, ಸಾದತ್ ಕಾಲೋನಿ ಬೊಮ್ಮನಕಟ್ಟೆ ಮುಂತಾದ ಭಾಗಗಳಲ್ಲಿ ರಸ್ತೆ ಬದಿಯಲ್ಲಿ ಗೋಮಾಂಸದ ಹೋಟೆಲ್ ಗಳು ಮತ್ತು ಗೋಮಾಂಸದ ಕಬಾಬ್ ಅಂಗಡಿಗಳು ನಡೆಯುತ್ತಿದ್ದು. ನಗರಸಭೆಯ ವ್ಯಾಪ್ತಿಯಲ್ಲಿ ಇರುವುದರಿಂದ ಮುನ್ಸಿಪಾಲ್ ಆಕ್ಟ್ ಪ್ರಕಾರ ಅಕ್ರಮ ಕಸಾಯಿ ಖಾನೆಗಳು ಮತ್ತು ಅಕ್ರಮ ಗೋಮಾಂಸದ ಹೋಟೆಲ್ ಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಾನೂನು ಪಾಲನೆ ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವು ನಗರಸಭೆಯ ಆಯುಕ್ತರ ವಿರುದ್ಧ ಇಡೀ ಹಿಂದೂ ಸಮಾಜ ಬೀದಿಗಿಳಿಯುವ ಅನಿವಾರ್ಯತೆ ಇರುತ್ತದೆ ಹಾಗಾಗಲು ಬಿಡದೆ ತಾವುಗಳು ಒಂದು ವಾರದೊಳಗೆ ಅಕ್ರಮ ಕಸಾಯಿ ಖಾನೆಗಳನ್ನು ತೆರವುಗೊಳಿಸಿ ಅಕ್ರಮ ಗೋಮಾಂಸದ ಹೋಟೆಲ್ ಗಳನ್ನು ತೆರವು ಮಾಡಬೇಕು ಇಲ್ಲವಾದಲ್ಲಿ ಮುಂದಿನ ಉಗ್ರ ಹೋರಾಟದ ರೂಪುರೇಷೆಯನ್ನು ಹಿಂದು ಜಾಗರಣ ವೇದಿಕೆ ಮಾಡುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
Also read: ಶೃಂಗೇರಿ ಶಾರದಾ ಪೀಠದ ನೂತನ ಆಡಳಿತಾಧಿಕಾರಿಯಾಗಿ ಪಿ.ಎ. ಮುರಳಿ ನೇಮಕ
ಜಿಲ್ಲಾ ಸಂಚಾಲಕರಾದ ದೇವರಾಜ್ ಅರಳಿಹಳ್ಳಿ. ಜಿಲ್ಲಾ ಸಮಿತಿ ಪ್ರಮುಖರುಗಳಾದ ಉಮೇಶ್ ಗೌಡ, ಮೇಘರಾಜ್, ಸಂತೋಷ್, ಮುರುಡೇಶ್, ಕೃಷ್ಣ, ಪವನ, ಭರತ್ ರಾವ್ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post