ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಆಯುಕ್ತ ಮನೋಹರ್ ಅವರನ್ನು ರಾಜ್ಯ ಸರ್ಕಾರ ವಗಾವಣೆ ಮಾಡಿದೆ. ಈ ವಿಚಾರವನ್ನು ಸ್ವತಃ ಮನೋಹರ್ ಅವರೇ ಖಚಿತಪಡಿಸಿದ್ದು, ಇವರ ಜಾಗಕ್ಕೆ ಹೊಸಕೋಟೆ ನಗರಸಭೆ ಆಯುಕ್ತ ಪರಮೇಶ್ ಅವರನ್ನು ನಿಯೋಜಿಸಲಾಗಿದೆ.
ಭದ್ರಾವತಿಯಿಂದ ವರ್ಗಾವಣೆ ಮಾಡಿರುವ ಮನೋಹರ್ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸದೆ ಇರುವುದು ಆಶ್ವರ್ಯ ಮೂಡಿಸಿದ್ದು, ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಸರಳ, ಸಜ್ಜನಿಕೆಯ ಹಾಗೂ ಜನರ ಕಷ್ಟಕಾರ್ಪಣ್ಯಗಳಿಗೆ ಹಾಗೂ ಅಹವಾಲುಗಳಿಗೆ ನೇರವಾಗಿ ಸ್ಪಂದಿಸುತ್ತಿದ್ದ ಮನೋಹರ್ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರಮುಖವಾಗಿ ಕಸ ವಿಲೇವಾರಿ, ಪ್ಲಾಸ್ಟಿಕ್ ಬಳಕೆ ನಿಷೇಧ, ಕೊರೋನಾ ಮಾರ್ಗಸೂಚಿ ಪಾಲನೆ, ಭದ್ರಾ ನದಿ ಪ್ರವಾಹದ ಸಮಯದಲ್ಲಿನ ಇವರ ಕಾರ್ಯಗಳು ಶ್ಲಾಘನೀಯವಾದುದು.
ಈಗ್ಗೆ ಕೆಲವು ತಿಂಗಳ ಹಿಂದೆ ಇವರ ವರ್ಗಾವಣೆ ಆಗಿತ್ತಾದರೂ ಒಂದೆರಡು ದಿನಗಳಲ್ಲೇ ಆದೇಶ ರದ್ಧಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post