ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕು ಶಾಸಕ ಬಿ.ಕೆ. ಸಂಗಮೇಶ್ವರ್ ಗೃಹ ಕಚೇರಿಯ ಆವರಣದಲ್ಲಿ ಆಯುಷ್ ಔಷಧಿ ಕಿಟ್‌ಗಳನ್ನು ಶಾಸಕ ಸಂಗಮೇಶ್ವರ್ ಸಾಂಕೇತಿಕವಾಗಿ ಬಿಡುಗಡೆಗೊಳಿಸಿದರು.
ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಕೋವಿಡ್ ಸೋಂಕಿತರಿಗೆ ರೋಗ ನಿರೋಧಕ ವೃದ್ಧಿಸುವ ಹಾಗೂ ಆಲೋಪತಿ ಔಷಧದ ಜೊತೆಗೆ ಆರ್ಯುವೇದಿಕ್ ಔಷದಿಗಳನ್ನು ಪ್ರಾಯೋಗಿಕವಾಗಿ ರೋಗಿಗಳಿಗೆ ನೀಡಲಾಗುವುದು. ಹತ್ತು ದಿನದ ನಂತರ ಕಾಣುವ ಪರಿಣಾಮವನ್ನು ಗಮನಿಸಿ, ನಂತರ ಸರ್ಕಾರ ಬಿಡುಗಡೆ ಮಾಡುವ ಹೆಚ್ಚಿನ ಆರ್ಯುವೇದ ಕಿಟ್‌ಗಳನ್ನು ತಾಲೂಕಿನ ಪ್ರತಿಯೊಬ್ಬ ರೋಗಿಗಳಿಗೆ ವಿತರಿಸಲಾಗುವುದು.
ಇದೇ ವೇಳೆ ಔಷದಿಯನ್ನು ತೆಗೆದುಕೊಳ್ಳುವ ವಿಧಾನವನ್ನು ಡಾ. ರವಿಶಂಕರ್ ವಿವರಿಸಿದರು. ಸೂಡಾ ಸದಸ್ಯ ಬಿ.ಜಿ. ರಾಮಲಿಂಗಯ್ಯ, ಡಾ. ಪುಷ್ಪ, ಡಾ. ದತ್ತಾತ್ರೆಯ, ಡಾ. ಅನಿಲ್‌ಕುಮಾರ್, ಡಾ. ವಿಜಯವಾಣಿ, ಡಾ. ಸುಧೀಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post