ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನ ಸುಣ್ಣದಹಳ್ಳಿಯ ಸುಪ್ರಸಿದ್ದ ಶ್ರೀವೀರಾಂಜನೇಯ ಸ್ವಾಮಿಯವರ ರಥೋತ್ಸವ ಮಾರ್ಚ್ 9ರಂದು ನಡೆಯಲಿದೆ.
ಎಷ್ಟು ದಿನ ಕಾರ್ಯಕ್ರಮಗಳು:
ಮಾರ್ಚ್ 7ರಂದು ಮಂಗಳವಾರ ಬೆಳಗ್ಗೆ ಪಂಚಾಮೃತ ಅಭಿಷೇಕ, ಸಂಜೆ ವಾಸ್ತು ರಾಕ್ಷೋಘ್ನಹೋಮ, ವಾಸ್ತು ಪೂಜೆ, ದಿಗ್ ಬಲಿ ಹಾಗೂ ಯಾಗಶಾಲಾ ಪ್ರವೇಶ ನಡೆಯಲಿದೆ.
ಮಾರ್ಚ್ 8ರ ಬುಧವಾರ ಬೆಳಗ್ಗೆ ಅಂಕುರಾರ್ಪಣೆ, ನವಗ್ರಹ ಹೋಮ, ಗರುಡಹೋಮ, ಭೇರಿತಾಡನ, ಕಂಕಣ ಬಂಧನ, ಧ್ವಜಾರೋಹಣ, ಸಂಜೆ ಅಗ್ನಿ ಜನನ, ರಂಗಪೂಜೆ, ತಂತ್ರಬಲಿ ನಡೆಯಲಿದೆ.
Also read: ರಾಜ್ಯದಲ್ಲಿ ಹೆಚ್ 3ಎನ್ 2 ವೈರಸ್ ಪತ್ತೆ: ಸಚಿವ ಸುಧಾಕರ್ ಏನು ಹೇಳಿದ್ದೇನು? ಇಲ್ಲಿದೆ ನೋಡಿ
ಮಾರ್ಚ್ 9ರ ಗುರುವಾರ ಪಂಚಾಮೃತ ಅಭಿಶೇಕ, ರಥಶುದ್ಧಿ, ಪ್ರಧಾನ ಹೋಮ, ಮಧ್ಯಾಹ್ನ 12 ಗಂಟೆಗೆ ರಥೋತ್ಸವ, ಅನ್ನ ಸಂತರ್ಪಣೆ, ಸಂಜೆ ಅಷ್ಟಾವಧಾನ ಸೇವೆ, ಬಲಿ, ಶಯನೋತ್ಸವ ನಡೆಯಲಿದೆ.
ಮಾರ್ಚ್ 10ರ ಶುಕ್ರವಾರ ಬೆಳಗ್ಗೆ ಪಂಚಾಮೃತ ಅಭಿಷೇಕ, ಅವಭೃತ ಸ್ನಾನ, ಪ್ರಧಾನ ಹೋಮದ ಪೂರ್ಣಾಹುತಿ, ಗಣಹೋಮ, ಸಂಜೆ ರಾಜಬೀದಿ ಉತ್ಸವ ನಡೆಯಲಿದೆ.
ಮಾರ್ಚ್ 11ರ ಶನಿವಾರ ಪಂಚಾಮೃತ ಅಭಿಷೇಕ, ಕಲಾತತ್ವ ಹೋಮ, ಕುಂಭಾಭಿಷೇಕ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post