ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಆಂತರಿಕ ಭಿನ್ನಮತದ ಹಿನ್ನೆಲೆಯಲ್ಲಿ ಅಮ್ ಆದ್ಮಿ ಪಕ್ಷದ ನಾಲ್ವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತಂತೆ ಕಲ್ಪ ಮೀಡಿಯಾ ಹೌಸ್ ಜೊತೆಯಲ್ಲಿ ಮಾತನಾಡಿದ ಎಎಪಿ ತಾಲೂಕು ಪ್ರಧಾನ ಕಾರ್ಯದರ್ಶಿ ವಿ. ವಿನೋದ್, ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಚರ್ಚಿಸಿ, ಒಮ್ಮತದಿಂದ ಶ್ರಮಿಸಿದ್ದೇವೆ. ಆದರೆ, ಕೆಲವು ತಪ್ಪು ಸಂವಹನ ಮತ್ತು ಕೆಲವು ಸಂದರ್ಭಗಳು ಹಾಗೂ ಮಾತುಗಳಿಂದ ನಾವುಗಳು ಬೇಸರಗೊಂಡು ರಾಜೀನಾಮೆಯ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.
ಪಕ್ಷದ ಮೇಲೆ ನಮಗೆ ಅಭಿಮಾನವಿದೆ. ಆದರೆ, ಇಲ್ಲಿಯ ಕೆಲವು ಮುಖಂಡರ ಮಾತು ಹಾಗೂ ವಿವೇಚನೆಗಳನ್ನು ನಾವು ಒಪ್ಪಲು ಸಿದ್ದರಿಲ್ಲ. ಹೀಗಾಗಿ, ಪಕ್ಷದಿಂದ ಹೊರಬರುತ್ತಿದ್ದೇವೆ. ಮುಂದಿನ ನಿರ್ಧಾರವನ್ನು ಶೀಘ್ರ ತಿಳಿಸುತ್ತೇವೆ ಎಂದಿದ್ದಾರೆ.
ವಿ. ವಿನೋದ್ ಸೇರಿ, ಎಎಪಿ ತಾಲೂಕು ಉಪಾಧ್ಯಕ್ಷ ಮುಳ್ಕೆರೆ ಲೋಕೇಶ್, ಮಹಿಳಾ ಘಟಕದ ಅಧ್ಯಕ್ಷರಾದ ಕಾಂತದಿನೇಶ್ ಹಾಗೂ ತಾಲೂಕು ಕಾರ್ಯದರ್ಶಿ ಪ್ರದೀಪ್ ಅವರುಗಳು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















